ಕೋತಿಯ ತಾಯಿ ಪ್ರೇಮ.. ಸತ್ತ ಮರಿಯನ್ನು ಹೊತ್ತುಕೊಂಡು ತಿರುಗುತ್ತಿದೆ..
🎬 Watch Now: Feature Video
ದೊಡ್ಡಬಳ್ಳಾಪುರ : ಇಂದು ವಿಶ್ವ ಅಮ್ಮಂದಿರ ದಿನ.. ಫೇಸ್ ಬುಕ್, ವಾಟ್ಸ್ಆ್ಯಪ್ಗಳಲ್ಲಿ ತಮ್ಮ ತಾಯಂದಿರುಗಳಿಗೆ ಅಭಿಮಾನಿಗಳ ಸುರಿಮಳೆಗೈದಿದ್ದಾರೆ. ಮಾತೃ ವಾತ್ಸಲ್ಯ ಕೇವಲ ಮನುಷ್ಯರಿಗೆ ಮಾತ್ರ ಸೀಮಿತವಲ್ಲ. ಪ್ರಾಣ ಪಕ್ಷಿಗಳಲ್ಲೂ ತಾಯಿ ಪ್ರೇಮ ಕಾಣುತ್ತೇವೆ. ಕೆಲವು ದಿನಗಳಿಂದ ನಗರದಲ್ಲಿ ಸುರಿದ ಮಳೆಗೆ ಮರಿ ಕೋತಿ ಸಾವನ್ನಪ್ಪಿತ್ತು. ಆದರೆ, ತಾಯಿ ಕೋತಿಗೆ ತನ್ನ ಮರಿ ಕೋತಿಯ ಸಾವನ್ನು ಒಪ್ಪಿಕೊಳ್ಳುವ ಸ್ಥಿತಿಯಲ್ಲಿ ಇಲ್ಲ. ತನ್ನ ಮರಿ ಇನ್ನೂ ಜೀವಂತವಾಗಿದೆ ಎಂಬ ಭಾವನೆ ಅದಕ್ಕೆ. ಸತ್ತ ಮರಿಯನ್ನ ತನ್ನ ಜೊತೆಯಲ್ಲಿ ಹೊತ್ತುಕೊಂಡು ಕೋತಿಗಳ ಹಿಂಡುಗಳ ಜೊತೆ ಹೋಗುತ್ತಿದೆ.