ಚಲಿಸುತ್ತಿದ್ದ ರೈಲಿನಲ್ಲೇ ಖದೀಮನ ಕೈ ಚಳಕ: ಕಣ್ಣು ಮುಚ್ಚಿ ಬಿಡುವಷ್ಟರಲ್ಲೇ ಮೊಬೈಲ್ ಕಳ್ಳತನ - ಮೊಬೈಲ್ ಕಳ್ಳತನ
🎬 Watch Now: Feature Video
ಕತಿಹಾರ್/ಬಿಹಾರ್: ಬಸ್, ರೈಲಿನಲ್ಲಿ ಪ್ರಯಾಣಿಸುವವರು ಕುರಿತು ಎಚ್ಚರಿಕೆ ವಹಿಸುವುದು ಮುಖ್ಯ. ಬರೌನಿ ರೈಲು ಮಾರ್ಗದಲ್ಲಿ ಸಂಚರಿಸುವವರ ಮೊಬೈಲ್, ಚಿನ್ನದ ಸರ ಸೇರಿದಂತೆ ಇತರ ಬೆಲೆಬಾಳುವ ವಸ್ತುಗಳನ್ನು ಕಳ್ಳತನ ಮಾಡುವ ದರೋಡೆಕೋರರ ತಂಡವೊಂದು ಲಗ್ಗೆ ಇಟ್ಟಿದೆ. ಕತಿಹಾರ್‌ನಿಂದ ಪಾಟ್ನಾಗೆ ಇಂಟರ್‌ಸಿಟಿ ಎಕ್ಸ್‌ಪ್ರೆಸ್‌ನಲ್ಲಿ ಹೋಗುತ್ತಿದ್ದ ಪ್ರಯಾಣಿಕನ ಮೊಬೈಲ್ಅನ್ನು ಕ್ಷಣಾರ್ಧದಲ್ಲಿ ದರೋಡೆ ಮಾಡಿದ ವಿಡಿಯೋ ಒಂದು ಲಭ್ಯವಾಗಿದೆ. ರೈಲ್ವೆ ಸೇತುವೆ ಮೇಲೆ ನಿಂತಿರುವ ಖದೀಮನೊಬ್ಬ ಒಂದು ಸೆಕೆಂಡ್ನಲ್ಲಿ ಯುವಕನ ಕೈಯಿಂದ ಮೊಬೈಲ್ ಕಸಿದುಕೊಂಡಿದ್ದಾನೆ.