ಗುದ್ದಲಿ ಹಿಡಿದು ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ ಸಚಿವ ಬಿ ಸಿ ನಾಗೇಶ್ - ಶಾಲಾ ಆವರಣವನ್ನು ಸ್ವಚ್ಛಗೊಳಿಸಿದ ಸಚಿವ ಬಿಸಿ ನಾಗೇಶ್
🎬 Watch Now: Feature Video
ತುಮಕೂರು : ರಾಜ್ಯದಾದ್ಯಂತ ಪ್ರಸಕ್ತ ಶೈಕ್ಷಣಿಕ ವರ್ಷದ ಮೊದಲ ದಿನವಾಗಿರುವ ಮೇ 16ರಂದು ಮಕ್ಕಳು ಶಾಲೆಗೆ ಬರಲಿದ್ದಾರೆ. ಹೀಗಾಗಿ, ಶಾಲಾ ಆವರಣವನ್ನು ಸ್ವಚ್ಛವಾಗಿರಿಸಿರುವಂತೆ ಸೂಚಿಸಿರುವ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಖಾತೆ ಸಚಿವ ಬಿ ಸಿ ನಾಗೇಶ್ ಭಾನುವಾರ ತಾವೇ ಸ್ವಯಂ ಸ್ವಚ್ಛಗೊಳಿಸಿದರು. ತಿಪಟೂರು ತಾಲೂಕಿನ ಕೆರೆಗೋಡಿ ರಂಗಾಪುರ ಗ್ರಾಮದ ಸರ್ಕಾರಿ ಶಾಲೆಗೆ ದಿಢೀರ್ ಭೇಟಿ ನೀಡಿದ್ದ ವೇಳೆ, ಸ್ಥಳದಲ್ಲಿದ್ದ ಶಾಲಾ ಸಿಬ್ಬಂದಿಯೊಂದಿಗೆ ಸ್ವಚ್ಛಗೊಳಿಸಲು ಮುಂದಾದರು.