ಉದ್ಯಮಿ ಹತ್ಯೆ ಮಾಡಿದ ದುಷ್ಕರ್ಮಿಗಳು: ದೃಶ್ಯ ಸಿಸಿಟಿವಿಯಲ್ಲಿ ಸೆರೆ - ಗಣಿ ಉದ್ಯಮಿ ಕೊಲೆ
🎬 Watch Now: Feature Video
ಕಾಶೀಪುರ(ಉತ್ತರಾಖಂಡ): ಇಲ್ಲಿನ ಕಾಶೀಪುರ ಕೊತ್ವಾಲಿ ಪ್ರದೇಶದ ಕುಂದೇಶ್ವರ ಪೊಲೀಸ್ ಹೊರ ಠಾಣೆ ಪ್ರದೇಶದ ಜುಡ್ಕಾ ಗ್ರಾಮದಲ್ಲಿ, ದುಷ್ಕರ್ಮಿಗಳು ಮನೆಗೆ ನುಗ್ಗಿ ಗಣಿ ಉದ್ಯಮಿ ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಘಟನೆಯಲ್ಲಿ ಗಣಿ ಉದ್ಯಮಿ ಸ್ಥಳದಲ್ಲೇ ಸಾವಿಗೀಡಾಗಿದ್ದಾರೆ. ಮಾಹಿತಿ ಪ್ರಕಾರ, ಗ್ರಾಮದ ಜುಡ್ಕಾ ನಂಬರ್-1ರಲ್ಲಿನ ಸ್ಟೋನ್ ಕ್ರಷರ್ ಮಾಲೀಕ ಮಹಲ್ ಸಿಂಗ್ ಬೆಳಗ್ಗೆ ಮನೆ ಬಾಗಿಲಲ್ಲಿ ಕುಳಿತು ಟೀ ಕುಡಿಯುತ್ತಿದ್ದರು. ಈ ವೇಳೆ, ಬೈಕ್ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು, ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಈ ಘಟನೆ ಸಿಸಿಟಿವಿಯಲ್ಲಿ ಸೆರೆಯಾಗಿದೆ.
Last Updated : Oct 13, 2022, 5:26 PM IST