ಬೆಳಗಾವಿ : ಮದುವೆ ಆಗಲು ನೋಡಿದ ಸಂಬಂಧಗಳು ಪದೇ ಪದೆ ರದ್ದಾಗುತ್ತಿದ್ದರಿಂದ ಮನನೊಂದು ಯುವಕನೋರ್ವ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಬೆಳಗಾವಿ ತಾಲೂಕಿನ ಕೆ. ಕೆ. ಕೊಪ್ಪ ಗ್ರಾಮದಲ್ಲಿ ಭಾನುವಾರ ನಡೆದಿದೆ. ಕೆ. ಕೆ. ಕೊಪ್ಪ ಗ್ರಾಮದ ಸಂತೆ ಬೀದಿಯ ಬಸವರಾಜ ಸೋಮಪ್ಪ ಡೊಂಗರಗಾವಿ (28) ಆತ್ಮಹತ್ಯೆಗೆ ಶರಣಾದ ಯುವಕ.
ಮದುವೆಯಾಗಲು ನೋಡಿದ ಅದೆಷ್ಟೋ ವಧುಗಳ ಸಂಬಂಧಗಳೆಲ್ಲವೂ ರದ್ದಾಗುತ್ತಿದ್ದವು. ಇದರಿಂದ ಬೆಸತ್ತಿದ್ದ ಬಸವರಾಜ, ನನಗೆ ಕಂಕಣ ಭಾಗ್ಯವೇ ಕೂಡಿ ಬರುತ್ತಿಲ್ಲ ಎಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ತಮ್ಮದೇ ಜಮೀನಿನಲ್ಲಿ ಬಸವರಾಜ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಮೃತನ ತಂದೆ ಸೋಮಪ್ಪ ಡೊಂಗರಗಾವಿ ಅವರು ಹಿರೇಬಾಗೇವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.
ಇದನ್ನೂ ಓದಿ: ಮೈಸೂರು: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ
ಇದನ್ನೂ ಓದಿ: ಅಪಾರ್ಟ್ಮೆಂಟ್ನಲ್ಲಿ ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ ಪ್ರಕರಣ: ಎಫ್ಐಆರ್ನಲ್ಲಿ ಏನಿದೆ?