ಜೀವ ಕೈಯಲ್ಲಿ ಹಿಡಿದು ನದಿ ದಾಟಿ ಶಾಲೆಗೆ ತೆರಳುವ ಮಕ್ಕಳು: ಇವರ ಗೋಳು ಕೇಳೋರ್ಯಾರು? - Etv bharat kannada
🎬 Watch Now: Feature Video
ನಾಶಿಕ್(ಮಹಾರಾಷ್ಟ್ರ): ದೇಶದ ಕೆಲವು ರಾಜ್ಯಗಳಲ್ಲಿ ಮಳೆಯಾರ್ಭಟ ಜೋರಾಗಿದೆ. ಹೀಗಾಗಿ, ಅನೇಕ ರೀತಿಯ ಸಮಸ್ಯೆ ಉಂಟಾಗಿವೆ. ಮಹಾರಾಷ್ಟ್ರದ ನಾಶಿಕ್ನಲ್ಲಿ ಮಕ್ಕಳು ತುಂಬಿ ಹರಿಯುವ ನದಿ ದಾಟಿಯೇ ಶಾಲೆಗೆ ಹೋಗುತ್ತಿದ್ದಾರೆ. ಇಲ್ಲಿನ ಪೇಠ ತಾಲೂಕಿನ ಮಕ್ಕಳ ಪ್ರತಿದಿನದ ಸಂಕಷ್ಟ ಇದು. ಕೆಲವೊಮ್ಮೆ ಪೋಷಕರು ತಮ್ಮ ಮಕ್ಕಳನ್ನು ಭುಜದ ಮೇಲೆ ಅಥವಾ ದೊಡ್ಡ ದೊಡ್ಡ ಪಾತ್ರೆಗಳಲ್ಲಿ ಕುಳ್ಳಿರಿಸಿ ನದಿ ದಾಟಿಸುತ್ತಾರೆ. ಸೇತುವೆ ನಿರ್ಮಿಸುವಂತೆ ಜಿಲ್ಲಾಧಿಕಾರಿ ಕಚೇರಿಗೆ ಹಲವು ಮನವಿ ಮಾಡಿಕೊಂಡರೂ ಪ್ರಯೋಜನವಾಗಿಲ್ಲ ಅಂತಾರೆ ಇಲ್ಲಿನ ನಿವಾಸಿಗಳು.