ಹನಿ ನೀರಿಗಾಗಿ ಪ್ರಾಣವನ್ನೇ ಪಣಕ್ಕಿಡುವ ಮಹಿಳೆಯರು.. ಬಾವಿಗಿಳಿದು ನೀರು ಸಂಗ್ರಹ! - ಮಧ್ಯಪ್ರದೇಶದಲ್ಲಿ ಬಾವಿಗಿಳಿದು ನೀರು ತುಂಬುವ ಮಹಿಳೆಯರು
🎬 Watch Now: Feature Video
ಡಿಂಡೋರಿ(ಮಧ್ಯಪ್ರದೇಶ): ಜೀವ ಜಲಕ್ಕಾಗಿ ದೇಶದ ಕೆಲವೊಂದು ಭಾಗಗಳಲ್ಲಿ ಈಗಲೂ ಹಾಹಾಕಾರವಿದೆ. ಅಂತಹ ಪ್ರಕರಣವೊಂದು ಮಧ್ಯಪ್ರದೇಶದ ಡಿಂಡೋರಿಯ ಘುಸಿಯಾ ಗ್ರಾಮದಲ್ಲಿ ಕಂಡು ಬಂದಿದೆ. ಹನಿ ನೀರಿಗಾಗಿ ಗ್ರಾಮದ ಬಹುತೇಕ ಮಹಿಳೆಯರು ಬಾವಿಗಿಳಿದು, ನೀರು ತುಂಬುತ್ತಾರೆ. ಗ್ರಾಮದಲ್ಲಿರುವ ಮೂರು ಬಾವಿಗೆ ಇಳಿದು, ನೀರು ಸಂಗ್ರಹ ಮಾಡುತ್ತಾರೆ. ಚುನಾವಣೆ ಸಂದರ್ಭದಲ್ಲಿ ಸ್ಥಳಕ್ಕೆ ಭೇಟಿ ನೀಡಿರುವ ಮುಖಂಡರು ಭರವಸೆ ನೀಡುತ್ತಾರೆ. ಆದರೆ, ನೀರಿನ ಭರವಸೆ ಇಲ್ಲಿಯವರೆಗೆ ಭರವಸೆಯಾಗಿ ಉಳಿದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಯಾವುದೇ ಕಾರಣಕ್ಕೂ ಮತ ಹಾಕದಂತೆ ನಿರ್ಧರಿಸಿದ್ದೇವೆ ಎಂದಿದ್ದಾರೆ.