ಅರಬ್ಬೀ ಸಮುದ್ರದಲ್ಲಿ ತೂಫಾನ್ ಅಬ್ಬರ... ಮೊಬೈಲ್ನಲ್ಲಿ ಸೆರೆಯಾಯ್ತು ರೋಚಕ ವಿಡಿಯೋ - ಅರಬ್ಬೀ ಸಮುದ್ರದಲ್ಲಿ ತೂಫಾನ್ ಅಬ್ಬರ
🎬 Watch Now: Feature Video

ಕೋಝಿಕ್ಕೋಡ್ (ಕೇರಳ): ವೆಲ್ಲಾಯಿಲ್ ಕರಾವಳಿಯ ಅರಬ್ಬೀ ಸಮುದ್ರದಲ್ಲಿ ಇಂದು ಬೆಳಿಗ್ಗೆ ಸುಮಾರು 10 ನಿಮಿಷಗಳ ಕಾಲ ಚಂಡಮಾರುತ ಸಂಭವಿಸಿದ್ದು, ಅದರ ವಿಡಿಯೋ ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿವೆ. ಜೋರಾಗಿ ಬೀಸಿರುವ ಗಾಳಿಯಿಂದಾಗಿ ಅನೇಕ ಮೀನುಗಾರರ ದೋಣಿ ಹಾಗೂ ಸಮೀಪದ ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ.ಇದರಿಂದ ಮೀನುಗಾರರು ಹಾಗೂ ಸ್ಥಳೀಯರಲ್ಲಿ ಆತಂಕ ಮೂಡಿದೆ. ಕಳೆದ ಮೂರು ದಿನಗಳಿಂದ ಕೇರಳದಲ್ಲಿ ಹೇರಳವಾಗಿ ಮಳೆಯಾಗ್ತಿದ್ದು, ಬಿರುಗಾಳಿ ಬೀಸಲು ಶುರುವಾಗಿದೆ.