ವೇಗಿ ಉಮ್ರಾನ್ ಮಲಿಕ್​ಗೆ ಮತ್ತೊಂದು ಬಂಪರ್​.. ಸರ್ಕಾರಿ ಉದ್ಯೋಗ ನೀಡುವುದಾಗಿ ಮನೋಜ್ ಸಿನ್ಹಾ ಘೋಷಣೆ - ಟೀಂ ಇಂಡಿಯಾ ವೇಗಿ ಉಮ್ರಾನ್​

🎬 Watch Now: Feature Video

thumbnail

By

Published : May 24, 2022, 10:54 PM IST

ಜಮ್ಮು-ಕಾಶ್ಮೀರ್: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅದ್ಭುತ ಪ್ರದರ್ಶನ ನೀಡಿ, ಟೀಂ ಇಂಡಿಯಾಗೆ ಆಯ್ಕೆಯಾಗಿರುವ ಜಮ್ಮು ಎಕ್ಸ್​​​ಪ್ರೆಸ್ ಖ್ಯಾತಿಯ ವೇಗದ ಬೌಲರ್ ಉಮ್ರಾನ್ ಮಲಿಕ್ ಮನೆಗೆ ಲೆಪ್ಟಿನೆಂಟ್​ ಗವರ್ನರ್​ ಮನೋಜ್ ಸಿನ್ಹಾ ಭೇಟಿ ನೀಡಿದರು. ಈ ವೇಳೆ, ಅವರಿಗೆ ಅಭಿನಂದನೆ ಸಲ್ಲಿಸಿರುವ ಜಮ್ಮು- ಕಾಶ್ಮೀರ್ ಲೆಪ್ಟಿನೆಂಟ್​ ಗವರ್ನರ್​​ ಕೆಲಹೊತ್ತು ಮಾತುಕತೆ ನಡೆಸಿದರು. ಈ ವೇಳೆ ಮಾತನಾಡಿರುವ ಲೆಪ್ಟಿನೆಂಟ್​ ಗವರ್ನರ್​​ ಮನೋಜ್​ ಸಿನ್ಹಾ, ಉಮ್ರಾನ್​ ಇಡೀ ದೇಶವೇ ಹೆಮ್ಮೆ ಪಡುವಂತಹ ಕೆಲಸ ಮಾಡಿದ್ದಾರೆ. ಅವರ ತರಬೇತಿ ಹಾಗೂ ಇತರ ಸೌಲಭ್ಯ ಒದಗಿಸಲು ಜಮ್ಮು- ಕಾಶ್ಮೀರ ಸರ್ಕಾರ ಕ್ರಮ ಕೈಗೊಳ್ಳಲಿದೆ. ಇದರ ಜೊತೆಗೆ ಕ್ರೀಡೆಯ ಕೋಟಾದಡಿ ಅವರು ಇಷ್ಟಪಟ್ಟಾಗ ಸರ್ಕಾರಿ ಉದ್ಯೋಗ ನೀಡಲು ನಾವು ಬದ್ಧರಾಗಿದ್ದೇವೆ ಎಂದು ತಿಳಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.