45 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದ ಅಣಜಿ ಕೆರೆ.. ಕೋಡಿ ಬಿದ್ದ ಸ್ಥಳದಲ್ಲಿ ಜನವೋ ಜನ - ಅಡಿಕೆ ತೋಟ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16552989-thumbnail-3x2-sanju.jpg)
ದಾವಣಗೆರೆ ಜಿಲ್ಲೆಯಲ್ಲಿ ಸತತ ಎರಡು ದಿನಗಳಿಂದ ನಿರಂತರವಾಗಿ ಮಳೆ ಬೀಳುತ್ತಿರುವ ಕಾರಣ ಕೆರೆ ಕಟ್ಟೆಗಳು, ಹಳ್ಳ ಕೊಳ್ಳಗಳು ತುಂಬಿವೆ. ಇತ್ತ ದಾವಣಗೆರೆ ತಾಲೂಕಿನ ಅಣಜಿ ಕೆರೆ 45 ವರ್ಷಗಳ ಬಳಿಕ ತುಂಬಿ ಕೋಡಿ ಬಿದ್ದಿದ್ದು, ಜನ ಸೆಲ್ಫಿ ತೆಗೆದುಕೊಳ್ಳಲು ಮುಗಿಬೀಳ್ತಿದ್ದಾರೆ. ಇನ್ನು ಇದಲ್ಲದೇ ಮಕ್ಕಳು ಮೀನು ಹಿಡಿಯುವಲ್ಲಿ ಬ್ಯೂಸಿ ಆಗಿದ್ರು. ಇನ್ನು 45 ವರ್ಷಗಳ ಬಳಿಕ ತುಂಬಿದ ಕೆರೆಯನ್ನು ವೀಕ್ಷಿಸಲು ಜನಸ್ತೋಮ ಹರಿದುಬರುತ್ತಿದೆ. ಇನ್ನು ಅಣಜಿ ಕೆರೆಯ ಹಿನ್ನೀರಿನಲ್ಲಿ 300 ಎಕರೆ ಅಡಕೆ ತೋಟಗಳಿಗೆ ಕೆರೆ ನೀರು ಒದ್ದು ನಿಂತಿರುವ ಕಾರಣ ರೈತರು ಆತಂಕದಲ್ಲಿ ಕಾಲ ಕಳೆಯುತ್ತಿದ್ದಾರೆ.