ಮಾದರಿ ನಿರ್ಧಾರ: ಮಗನನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ - ಮಗನನ್ನ ಸರ್ಕಾರಿ ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ
🎬 Watch Now: Feature Video
ಕರ್ನೂಲ್(ಆಂಧ್ರಪ್ರದೇಶ): ಲಕ್ಷಾಂತರ ರೂಪಾಯಿ ಖರ್ಚು ಮಾಡಿಯಾದ್ರೂ ಸರಿ ತಮ್ಮ ಮಕ್ಕಳನ್ನ ಖಾಸಗಿ ಶಾಲೆ, ಕಾನ್ವೆಂಟ್ಗಳಿಗೆ ಹಾಕುವುದು ಇತ್ತೀಚಿನ ದಿನಗಳಲ್ಲಿ ಸಾಮಾನ್ಯವಾಗಿದೆ. ಆದರೆ, ಇಲ್ಲೋರ್ವ ಜಿಲ್ಲಾಧಿಕಾರಿ ತಮ್ಮ ಮಗನನ್ನ ಸರ್ಕಾರಿ ಅಂಗನವಾಡಿ ಕೇಂದ್ರಕ್ಕೆ ದಾಖಲಿಸುವ ಮೂಲಕ ಎಲ್ಲರಿಗೂ ಮಾದರಿಯಾಗಿದ್ದಾರೆ. ಕರ್ನೂಲ್ ಜಿಲ್ಲಾಧಿಕಾರಿ ಪಿ. ಕೋಟೇಶ್ವರ್ ರಾವ್ ತಮ್ಮ ಪುತ್ರನನ್ನ ಅಂಗನವಾಡಿಗೆ ದಾಖಲು ಮಾಡಿದ್ದಾರೆ. ಕಾರ್ಪೊರೇಟ್ ಸಂಸ್ಥೆಗಳಿಗಿಂತಲೂ ಸರ್ಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ನೀಡಲಾಗ್ತಿದ್ದು, ಹೀಗಾಗಿ ತಾವು ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿಸಿದ್ದಾರೆ. ಜೊತೆಗೆ ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಪೌಷ್ಟಿಕ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.