ಕೊಡಗು: ಕಾವೇರಿ ನದಿಗೆ ಹಾರಿದ ವ್ಯಕ್ತಿಯನ್ನು ರಕ್ಷಿಸಿದ ಸ್ಥಳೀಯರು.. ವಿಡಿಯೋ - ಕೊಡಗು ಜಿಲ್ಲೆಯ ಕುಶಾಲನಗರ
🎬 Watch Now: Feature Video
ಕೊಡಗು: ತುಂಬಿ ಹರಿಯುತ್ತಿದ್ದ ಕಾವೇರಿ ನದಿಗೆ ಹಾರಿದ ವ್ಯಕ್ತಿಯೊಬ್ಬನ್ನು ರಕ್ಷಣೆ ಮಾಡಿದ ಘಟನೆ ಕೊಡಗು ಜಿಲ್ಲೆಯ ಕುಶಾಲನಗರದಲ್ಲಿ ನಡೆದಿದೆ. ಕೊಪ್ಪದ ಬಳಿ ಗಣೇಶ್ ಎಂಬ ವ್ಯಕ್ತಿ ನದಿಗೆ ಹಾರಿದ್ದ. ಆಗ ನದಿಯಲ್ಲಿ ಮುಳುಗುತ್ತಿದ್ದನ್ನು ನೋಡಿ ಸ್ಥಳೀಯರು ತಕ್ಷಣವೇ ನೀರಿಗೆ ಹಾರಿ ಗಣೇಶ್ನನ್ನು ರಕ್ಷಣೆ ಮಾಡಿದ್ದಾರೆ. ಅಲ್ಲದೇ, ಕೆಲವರು ಗಣೇಶ್ ನೀರಿನಲ್ಲಿ ಮುಳುಗುತ್ತಿದ್ದ ದೃಶ್ಯವನ್ನು ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಗಣೇಶ್ ಮಾದಪಟ್ಟಣ ನಿವಾಸಿಯಾಗಿದ್ದು, ಕೌಟುಂಬಿಕ ಕಲಹದಿಂದ ನದಿಗೆ ಹಾರಿದ್ದ ಎನ್ನಲಾಗಿದೆ.