'ಹಾಗಾದರೆ ನಾನು ಹೊರಗೆ ಕುಳಿತುಕೊಳ್ಳಬೇಕೇ?' ಕೊಹ್ಲಿ ಬಗ್ಗೆ ಕೇಳಿದ ಪ್ರಶ್ನೆಗೆ ಕೆ.ಎಲ್.ರಾಹುಲ್ ಉತ್ತರ - ವಿರಾಟ್ ಬಗ್ಗೆ ಕೇಳಿದ ಪ್ರಶ್ನೆಗೆ ರಾಹುಲ್ ಉತ್ತರ
🎬 Watch Now: Feature Video

ಅಫ್ಘಾನಿಸ್ತಾನ ವಿರುದ್ಧ ಗುರುವಾರ ರಾತ್ರಿ ಪಂದ್ಯ ಮುಗಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡುತ್ತಿದ್ದ ಟೀಂ ಇಂಡಿಯಾ ಉಪನಾಯಕ ಕೆ.ಎಲ್.ರಾಹುಲ್ ಅವರಿಗೆ ಮಾಧ್ಯಮ ಸಿಬ್ಬಂದಿ, ವಿರಾಟ್ ಕೊಹ್ಲಿ ಅವರನ್ನು ಟಿ20ಯಲ್ಲಿ ಆರಂಭಿಕರಾಗಿ ಕಣಕ್ಕಿಳಿಸುವ ಇರಾದೆ ಇದೆಯೇ? ಎಂದು ಕೇಳಿದರು. ಇದಕ್ಕೆ ನಗುಮೊಗದಿಂದಲೇ ಪ್ರತಿಕ್ರಿಯಿಸಿದ ಅವರು, "ಹಾಗಾದರೆ ನಾನು ಹೊರಗೆ ಕುಳಿತುಕೊಳ್ಳಬೇಕೇ"? ಎಂದರು. ತಂಡದಲ್ಲಿ ಪ್ರತಿಯೊಬ್ಬರಿಗೂ ಒಂದೊಂದು ಜವಾಬ್ದಾರಿ ಇದೆ. ವಿರಾಟ್ ಕೊಹ್ಲಿ ಓರ್ವ ಅತ್ಯದ್ಭುತ ಬ್ಯಾಟರ್. ನಂಬರ್ ಒಂದರ ಕ್ರಮಾಂಕ ಅಥವಾ ನಂಬರ್ ಮೂರರ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ್ರೂ ಕೂಡ ಅವರ ಬ್ಯಾಟ್ನಿಂದ ರನ್ ಹರಿದು ಬರುತ್ತದೆ ಎಂದರು.