ಏಪ್ರಿಲ್ 29ಕ್ಕೆ ತೆರೆಯಲಿದೆ ಕೇದಾರನಾಥ ಧಾಮದ ಬಾಗಿಲು - ಕೇದಾರನಾಥ ಧಾಮದ ಬಾಗಿಲು ತೆರೆಯುವುದು
🎬 Watch Now: Feature Video
ರುದ್ರ ಪ್ರಯಾಗ್ (ಉತ್ತರಾಖಂಡ): ಮಹಾಶಿವರಾತ್ರಿಯ ಶುಭ ದಿನವಾದ ಇಂದು ಪುಣ್ಯಕ್ಷೇತ್ರ ಕೇದಾರನಾಥ ಧಾಮದ ಬಾಗಿಲು ತೆರೆಯುವ ಸಮಯವನ್ನು ಪೌರಾಣಿಕ ಸಂಪ್ರದಾಯ ಹಾಗೂ ಪಂಚಾಗದ ಪ್ರಕಾರ ಘೋಷಣೆ ಮಾಡಲಾಗಿದೆ. ಏಪ್ರಿಲ್ 29 ರಂದು ಬೆಳಗ್ಗೆ 6.10ಕ್ಕೆ ಮೇಷ ಲಗ್ನದಲ್ಲಿ ಬಾಬಾ ಕೇದಾರರ ಬಾಗಿಲು ತೆರೆಯಲಾಗುತ್ತಿದೆ. ಕೇದಾರರ ಪಂಚಮುಖಿ ವಿಗ್ರಹದ ಪಲ್ಲಕ್ಕಿ ಉತ್ಸವವು ಏಪ್ರಿಲ್ 26ರಂದು ಉಖಿಮತ್ನ ಓಂಕಾರೇಶ್ವರ ದೇವಸ್ಥಾನದಿಂದ ಕೇದಾರನಾಥ ಧಾಮಕ್ಕೆ ತೆರಳಲಿದೆ. ಏ. 26ರಂದು ಬಾಬಾ ಅವರ ಪಲ್ಲಕ್ಕಿಯು ಫಾಟಾಗೆ ಹೋಗಲಿದ್ದು, 27ರಂದು ಗೌರಿಕುಂಡ್‌ನಲ್ಲಿ ರಾತ್ರಿಯಿಡಿ ಇದ್ದು, ಏಪ್ರಿಲ್ 28 ರಂದು ಕೇದಾರನಾಥ ತಲುಪಲಿದೆ. ಚಳಿಗಾಲದ ಸಂದರ್ಭದಲ್ಲಿ ಪಂಚಮುಖಿ ವಿಗ್ರಹವು ಓಂಕಾರೇಶ್ವರ ದೇವಸ್ಥಾನದಲ್ಲಿರುತ್ತದೆ ಎಂದು ದೇವಾಲಯದ ಮೂಲಗಳು ತಿಳಿಸಿವೆ.