ಶಿಕ್ಷಕಿ ಗುಂಡಿಕ್ಕಿ ಕೊಂದ ಉಗ್ರರು... ಶ್ರೀನಗರ-ಜಮ್ಮು ಹೈವೇ ಬಂದ್ ಮಾಡಿ ಪ್ರತಿಭಟನೆ ನಡೆಸಿರುವ ಕಾಶ್ಮೀರಿ ಪಂಡಿತರು - ಹೈವೇ ಬಂದ್ ಮಾಡಿದ ಕಾಶ್ಮೀರಿ ಪಂಡಿತರು
🎬 Watch Now: Feature Video
ಖಾಜಿಗುಂಡ್(ಜಮ್ಮು-ಕಾಶ್ಮೀರ): ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದ ಕಾಶ್ಮೀರಿ ಪಂಡಿತ್ ಮಹಿಳೆಯೋರ್ವಳನ್ನ ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ ಘಟನೆ ಇಂದು ಮುಂಜಾನೆ ಕುಲ್ಗಾಂ ಪ್ರದೇಶದಲ್ಲಿ ನಡೆದಿದೆ. ಇದರ ಬೆನ್ನಲ್ಲೇ ಆಕ್ರೋಶ ವ್ಯಕ್ತಪಡಿಸುತ್ತಿರುವ ಕಾಶ್ಮೀರಿ ಪಂಡಿತರು ರಸ್ತೆ ತಡೆ ನಡೆಸಿದರು. ಶ್ರೀನಗರ-ಜಮ್ಮು ಹೆದ್ದಾರಿ ತಡೆದು, ಸರ್ಕಾರದ ವಿರುದ್ಧ ಆಕ್ರೋಶ ಕೂಗಿದರು. ಇದಕ್ಕೂ ಮುಂಚಿತವಾಗಿ ಶ್ರೀನಗರದಲ್ಲಿ ಪ್ರತಿಭಟನೆ ಸಹ ನಡೆಸಲಾಯಿತು. ಕಣಿವೆ ಪ್ರದೇಶದಲ್ಲಿ ಮುಸ್ಲಿಮೇತರ ನೌಕರರ ಮೇಲೆ ಸರಣಿ ದಾಳಿ ನಡೆಯುತ್ತಿದ್ದು, ಅಗತ್ಯ ಭದ್ರತಾ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿದರು.