ವಿಡಿಯೋ: ಕನ್ವರ್ ಯಾತ್ರೆಯಲ್ಲಿ 11 ತಿಂಗಳ ಕೂಸು ಭಾಗಿ.. ಮೋದಿ ಗೆಟಪ್ನಲ್ಲಿ ಮಿಂಚಿದ ಬಾಲಕಿ! - Etv Bharat kannada
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-15922169-thumbnail-3x2-wdfdfd.jpg)
ಮೀರತ್(ಉತ್ತರ ಪ್ರದೇಶ): ಹರಿದ್ವಾರದಲ್ಲಿ ನಡೆಯಲಿರುವ ಕನ್ವರ್ಯಾತ್ರೆಗೆ ಮೂಲೆ ಮೂಲೆಯಿಂದ ಭಕ್ತರ ಸಮೂಹವೇ ಹರಿದು ಬರುತ್ತಿದೆ. ಇದೀಗ ಉತ್ತರ ಪ್ರದೇಶದ 11 ತಿಂಗಳ ಕೂಸೊಂದು ಈ ಪಾದಯಾತ್ರೆಯಲ್ಲಿ ಭಾಗಿಯಾಗಿದೆ. ಪೋಷಕರೊಂದಿಗೆ ಮಗು ಕನ್ವರ್ ಯಾತ್ರೆಯ ಭಾಗವಾಗಿದೆ. ಇದರ ಜೊತೆಗೆ ಪುಟ್ಟ ಬಾಲಕಿಯೊಬ್ಬಳು ಮೋದಿ ಅವರ ಗೆಟಪ್ನಲ್ಲಿ ಮಿಂಚು ಹರಿಸಿದ್ದಾಳೆ. ಇದರ ಜೊತೆಗೆ ವಿಶೇಷ ಚೇತನರು ಇದರಲ್ಲಿ ಭಾಗಿಯಾಗಿದ್ದು, ಭೋಲೇನಾಥನ ಪರ ಜೈಕಾರ ಹಾಕುತ್ತಾ ಹೆಜ್ಜೆ ಹಾಕ್ತಿದ್ದಾರೆ.