ಡೆಡ್ಲಿ ಕೊರೊನಾ ಎಫೆಕ್ಟ್.... 50 ರೂಪಾಯಿಗೇ ಸಿಗ್ತಿದೆ 4 ಕೆಜಿ ಕೋಳಿ!
🎬 Watch Now: Feature Video
ಚಿಕ್ಕಬಳ್ಳಾಪುರ: ಕೊರೊನಾ ಭೀತಿ ಹಿನ್ನೆಲೆಯಲ್ಲಿ ಕೋಳಿ ಮಾರಾಟದಲ್ಲಿ ಭಾರಿ ಕುಸಿತ ಕಂಡಿದೆ. ಕೋಳಿ ತಿನ್ನುವುದರಿಂದ ಕೊರೊನಾ ಬರಲಿದೆ ಎಂಬ ವದಂತಿ ಎಲ್ಲೆಡೆ ಹರಡಿದೆ. ಗುಡಿಬಂಡೆ ತಾಲೂಕಿನ ಬೀಚಗಾನಹಳ್ಳಿ ಗ್ರಾಮದ ಸುಗುಣಾ ಕಂಪನಿಯು 4 ಕೆ.ಜಿ ತೂಗುವ ಕೋಳಿಗಳನ್ನು ಕೇವಲ ಐವತ್ತು ರೂಪಾಯಿಗೆ ಒಂದರಂತೆ, ರಸ್ತೆಯಲ್ಲಿ ನಿಂತು ಮಾರಾಟ ಮಾಡುತ್ತಿದ್ದಾರೆ. ಇದರಿಂದ ಖುಷಿಯಾಗಿರುವ ಮಾಂಸಪ್ರಿಯರು ಯಾರಿಗುಂಟು ಯಾರಿಗಿಲ್ಲ ಎಂಬಂತೆ ಖರೀದಿಗೆ ಮುಗಿಬಿದ್ದಿದ್ದಾರೆ.