UPSC ಟಾಪರ್ ಶೃತಿ ಶರ್ಮಾ ಸಂದರ್ಶನ.. ETV ಭಾರತ ಜೊತೆ ಸಾಧನೆಯ ಹಾದಿ ಬಗ್ಗೆ ಮಾತು - UPSC ಟಾಪರ್ ಶೃತಿ ಶರ್ಮಾ ಸಂದರ್ಶನ
🎬 Watch Now: Feature Video
2021ನೇ ಸಾಲಿನ ಕೇಂದ್ರ ಲೋಕಸೇವಾ ಆಯೋಗದ(ಯುಪಿಎಸ್ಸಿ) ಪರೀಕ್ಷೆಗಳ ಅಂತಿಮ ಫಲಿತಾಂಶ ಇಂದು ಪ್ರಕಟಗೊಂಡಿದೆ. ಮೊದಲ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜ್ನ ವಿದ್ಯಾರ್ಥಿನಿ ಶೃತಿ ಶರ್ಮಾ ಯಶಸ್ವಿಯಾಗಿದ್ದಾರೆ. ತಮ್ಮ ಯಶಸ್ಸಿನ ಬಗ್ಗೆ 'ಈಟಿವಿ ಭಾರತ' ಜೊತೆ ಅವರು ಮಾತನಾಡಿ, ಮನದಾಳ ಬಿಚ್ಚಿಟ್ಟಿದ್ದಾರೆ. ಎರಡನೇ ಪ್ರಯತ್ನದಲ್ಲೇ ಶೃತಿ ಈ ಕಠಿಣ ಪರೀಕ್ಷೆ ಪಾಸ್ ಮಾಡಿದ್ದಾಗಿ ತಿಳಿಸಿದ್ದಾರೆ. ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಕೋಚಿಂಗ್ ಅಕಾಡೆಮಿಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾಗ ಅಲ್ಲಿನ ಶಿಕ್ಷಕರು ಹೆಚ್ಚಿನ ಸಹಾಯ ಮಾಡಿದ್ದಾಗಿ ಶೃತಿ ಹೇಳಿಕೊಂಡಿದ್ದು, ತಾವು ಇತಿಹಾಸ ವಿಭಾಗದಲ್ಲಿ ಪರೀಕ್ಷೆ ಬರೆದು, ತೇರ್ಗಡೆಯಾಗಿದ್ದಾಗಿ ತಿಳಿಸಿದ್ದಾರೆ. ಸತತ ಪ್ರಯತ್ನ ಹಾಗೂ ನಿರಂತರ ಓದು ನನ್ನ ಸಾಧನೆಯಲ್ಲಿ ಮುಖ್ಯ ಪಾತ್ರ ವಹಿಸಿರುವುದಾಗಿ ಅವರು ಹೇಳಿಕೊಂಡಿದ್ದಾರೆ.