ಕೊಪ್ಪಳದಲ್ಲಿ ಭಾರಿ ಮಳೆ: ಜಲಾವೃತವಾದ ರೈಲ್ವೆ ಸೇತುವೆ - ರೈಲ್ವೆ ಸೇತುವೆ ಜಲಾವೃತ
🎬 Watch Now: Feature Video
ಕೊಪ್ಪಳ: ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಗೆ ಕುಕನೂರು ತಾಲೂಕಿನ ದ್ಯಾಂಪುರ ಬಳಿ ನಿರ್ಮಿಸಿರುವ ರೈಲ್ವೆ ಸೇತುವೆ ಜಲಾವೃತವಾಗಿದ್ದು, ಅಲ್ಲಿ ಟ್ರ್ಯಾಕ್ಟರ್ ಸಿಲುಕಿಕೊಂಡಿದೆ. ಗದಗ ವಾಡಿ ರೈಲ್ವೆ ಮಾರ್ಗದ ಕಳಸೇತುವೆ ಇದಾಗಿದ್ದು, ಅವೈಜ್ಞಾನಿಕ ಕಾಮಗಾರಿ ಮಾಡಿದ್ದರಿಂದ ಮಳೆಗಾಲದಲ್ಲಿ ಕೆಳಭಾಗ ನೀರು ನಿಂತುಕೊಳ್ಳುತ್ತದೆ. ಇದರಿಂದಾಗಿ ದ್ಯಾಂಪುರ - ತೊಂಡಿಹಾಳ, ನರೆಗಲ್ ಸಂಪರ್ಕದ ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ. ಅಲ್ಲದೇ ರೈಲ್ವೆ ಸೇತುವೆಯ ನೀರು ಪಕ್ಕದ ಜಮೀನಿಗೆ ನುಗ್ಗುತ್ತಿದೆ. ರೈಲ್ವೆ ಸೇತುವೆಯಿಂದ ಕೃಷಿ ಜಮೀನು ಕೊಚ್ಚಿಕೊಂಡು ಹೋಗುತ್ತಿದೆ. ರೈಲ್ವೆ ಸೇತುವೆ ಮೂಲಕ ಸರಾಗವಾಗಿ ನೀರು ಹರಿಯುವಂತೆ ಕ್ರಮವಹಿಸಲು ಸ್ಥಳೀಯರು ಆಗ್ರಹಿಸಿದ್ದಾರೆ.