ತುಂಗಭದ್ರಾ ನದಿ ತೀರದಲ್ಲಿ ಹಂಪಿ ದೇವಾಲಯದ ಆನೆಯ ಪುಣ್ಯಸ್ನಾನ - Sri Virupakseshwar Temple Elephant bath in tungabhadra river in Hampi Vijayanagara District
🎬 Watch Now: Feature Video
ವಿಜಯನಗರ : ಹಂಪಿಯ ಶ್ರೀ ವಿರೂಪಾಕ್ಷೇಶ್ವರ ದೇವಾಲಯದ ಆನೆಯು ತುಂಗಾಭದ್ರ ನದಿಯಲ್ಲಿ ಬಿಂದಾಸ್ ಆಗಿ ಸ್ನಾನ ಮಾಡಿದೆ. ಹಂಪಿಯ ಸಮೀಪ ತುಂಬಿ ಹರಿಯುತ್ತಿರುವ ತುಂಗಭದ್ರಾ ನದಿ ದಂಡೆಯಲ್ಲಿ ದೇವಾಲಯದ ಲಕ್ಷ್ಮಿ ಹೆಸರಿನ ಆನೆ ಜಳಕ ಮಾಡಿದೆ. ಸೊಂಡಿಲಿನಿಂದ ಮೈ ಮೇಲೆ ನೀರು ಹಾಕಿಕೊಂಡು ಆನೆ ಸ್ನಾನ ಮಾಡುವ ಅಪರೂಪದ ದೃಶ್ಯವನ್ನು ಜನರು ಕಣ್ತುಂಬಿಕೊಂಡಿದ್ದಾರೆ. ಜಲಾಶಯ ತುಂಬಿದ ಹಿನ್ನಲೆ ತುಂಗಭದ್ರಾ ನದಿಗೆ ಅಪಾರ ಪ್ರಮಾಣದ ನೀರು ಬಿಡಲಾಗಿದ್ದು, ನೀರು ಕಂಡು ಖುಷಿಯಾದ ಆನೆ ನದಿಗೆ ಇಳಿದು ನೀರಾಟ ಆಡಿದೆ.