ಕಾವೇರಿ ಹೋರಾಟಕ್ಕೂ ಬಗ್ಗದ ಮಂಡ್ಯ ಮಾರುಕಟ್ಟೆ, ಪ್ರಧಾನಿ ಕರೆಗೆ ಸಂಪೂರ್ಣ ಸ್ತಬ್ಧ - ಮಂಡ್ಯ ಸುದ್ದಿ
🎬 Watch Now: Feature Video
ಕಾವೇರಿ ಹೋರಾಟದ ಕರ್ಫ್ಯೂ ಸಂದರ್ಭದಲ್ಲಿಯೂ ನಿಲ್ಲದ ಮಂಡ್ಯ ಮಾರಕಟ್ಟೆ ವ್ಯಾಪಾರ ಇದೇ ಮೊದಲ ಬಾರಿಗೆ ಸಂಪೂರ್ಣ ಬಂದ್ ಆಗಿದ್ದು, ಈ ಮೂಲಕ ಜನತಾ ಕರ್ಫ್ಯೂ ಗೆ ಜಿಲ್ಲೆಯ ಜನರು ಬೆಂಬಲ ವ್ಯಕ್ತಪಡಿಸಿದ್ದಾರೆ, ನಗರ ಪ್ರದೇಶ ಸೇರಿದಂತೆ ಗ್ರಾಮಾಂತರ ಪ್ರದೇಶದಲ್ಲಿ ಕೂಡ ಜನರು ಪ್ರಧಾನಿ ಮನವಿಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. ವರ್ತಕರು ಅಂಗಡಿಗಳನ್ನು ಮುಚ್ಚಿದ್ದಾರೆ. ಮಾರುಕಟ್ಟೆಯಲ್ಲಿ ಸೂಚನಾ ಫಲಕವನ್ನು ಹಾಕಿದ್ದು ವ್ಯಾಪಾರಿಗಳು ಹಾಗೂ ರೈತರು ಬೆಂಬಲ ನೀಡುವಂತೆ ಮನವಿ ಮಾಡಿದ್ದಾರೆ.