ಮೆಟ್ರೋ ನಿಲ್ದಾಣದಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ: ವಿಡಿಯೋ ವೈರಲ್ - ಮೆಟ್ರೋ ನಿಲ್ದಾಣದಲ್ಲಿ ಯುವತಿ ಆತ್ಮಹತ್ಯೆ ಯತ್ನ
🎬 Watch Now: Feature Video
ರಾಜಧಾನಿ ದೆಹಲಿಯ ಅಕ್ಷರಧಾಮ ಮೆಟ್ರೋ ರೈಲು ನಿಲ್ದಾಣದಲ್ಲಿ ಯುವತಿಯೋರ್ವಳು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆಯಿತು. ಈ ವೇಳೆ ಆಕೆಯ ಜೀವ ಉಳಿಸುವಲ್ಲಿ ಸ್ಥಳೀಯರು ಯಶಸ್ವಿಯಾಗಿದ್ದು, ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಲಭ್ಯವಾಗಿರುವ ಮಾಹಿತಿ ಪ್ರಕಾರ, ಯುವತಿ ಕಿವುಡ ಮತ್ತು ಮೂಕ ಎನ್ನಲಾಗಿದೆ. ಈಕೆಯ ತಂದೆ-ತಾಯಿ ಸಹ ಕಿವುಡು ಮತ್ತು ಮೂಕರಾಗಿದ್ದಾರೆಂದು ತಿಳಿದುಬಂದಿದೆ. ಎತ್ತರದ ಜಾಗದಿಂದ ಕೆಳಗೆ ಜಿಗಿದಿರುವ ಪರಿಣಾಮ ಕೈ ಮತ್ತು ಕಾಲು ಮುರಿದಿದೆ. ಯುವತಿ ಕೆಳಗೆ ಜಿಗಿಯುತ್ತಿರುವ ವಿಡಿಯೋ ವೈರಲ್ ಆಗಿದೆ. ಮೆಟ್ರೋ ನಿಲ್ದಾಣದ ಎರಡನೇ ಪ್ಲಾಟ್ಫಾರ್ಮ್ನಲ್ಲಿ ಘಟನೆ ನಡೆದಿದೆ.