ಭಾರತಕ್ಕೆ ಬಂದ ಆಫ್ರಿಕನ್ ಅತಿಥಿಗಳು: ಮೋದಿ ಜನ್ಮದಿನದಂದು ಚೀತಾಗಳಿಗೆ ಸ್ವಾಗತ - Etv bharat kannada
🎬 Watch Now: Feature Video
ಕುನೊ ರಾಷ್ಟ್ರೀಯ ಉದ್ಯಾನವನ(ಮಧ್ಯಪ್ರದೇಶ): ಆಫ್ರಿಕಾ ಖಂಡದ ನಮೀಬಿಯಾ ದೇಶದಿಂದ ಕಾರ್ಗೋ ವಿಮಾನದ ಮೂಲಕ ಭಾರತಕ್ಕೆ 8 ಚೀತಾಗಳನ್ನು ಕರೆತರಲಾಗಿದೆ. ಈ ಚೀತಾಗಳನ್ನು ನಾಳೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಹುಟ್ಟುಹಬ್ಬದಂದೇ ಮಧ್ಯಪ್ರದೇಶದ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಬರಮಾಡಿಕೊಳ್ಳಲಿದ್ದಾರೆ. ಇಂದು ನಮೀಬಿಯಾದಿಂದ ಚೀತಾಗಳನ್ನು ಮೊದಲು ರಾಜಸ್ತಾನದ ಜೈಪುರ ವಿಮಾನ ನಿಲ್ದಾಣಕ್ಕೆ ಕರೆ ತರಲಾಯಿತು. ನಂತರ ಹೆಲಿಕಾಪ್ಟರ್‌ನಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ರವಾನಿಸಲಾಯಿತು. ಇವುಗಳಲ್ಲಿ 5 ಹೆಣ್ಣು ಮತ್ತು 3 ಗಂಡು ಚೀತಾಗಳಿವೆ. ಮೂರೇ ನಿಮಿಷದಲ್ಲಿ ತನ್ನ ವೇಗವನ್ನು 0 ದಿಂದ 103 km/h (64 mph)ಗೆ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಇವುಗಳಿದೆ.
Last Updated : Sep 17, 2022, 10:34 AM IST