ಹಾನಗಲ್‌ನಲ್ಲಿ ಜಾನುವಾರುಗಳ ಸಜೀವ ದಹನ: ಕಂಗಾಲಾದ ರೈತ - Livestock burnt in Haveri
🎬 Watch Now: Feature Video
ಹಾನಗಲ್: ತಡರಾತ್ರಿ ದನದ ಕೊಟ್ಟಿಗೆಗೆ ಆಕಸ್ಮಿಕ ಬೆಂಕಿ ತಗುಲಿ ಎತ್ತು, ಎಮ್ಮೆ, ಆಕಳು ಸಜೀವ ದಹನವಾಗಿರುವ ಘಟನೆ ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ನಿಸ್ಸೀಮ ಆಲದಕಟ್ಟಿ ಗ್ರಾಮದಲ್ಲಿ ನಡೆದಿದೆ. ಫಕ್ಕಿರಪ್ಪ ಜಾನುಗುಂಡಿ ಎಂಬುವರಿಗೆ ಸೇರಿದ ದನದ ಕೊಟ್ಟಿಗೆ ಇದಾಗಿದ್ದು, ಕೊಟ್ಟಿಗೆಯಲ್ಲಿದ್ದ ಎರಡು ಎತ್ತು, ಎರಡು ಎಮ್ಮೆ, ಒಂದು ಆಕಳು ಸಾವಿಗೀಡಾಗಿವೆ. ಅಂದಾಜು ಎರಡು ಲಕ್ಷಕ್ಕೂ ಅಧಿಕ ಹಾನಿಯಾಗಿದೆ ಎನ್ನಲಾಗುತ್ತಿದೆ. ಕಷ್ಟಪಟ್ಟು ರಾಸುಗಳನ್ನು ಸಾಕಿದ್ದ ರೈತನಿಗೆ ಘಟನೆಯಿಂದ ದಿಕ್ಕು ತೊಚದಂತಾಗಿದೆ.