thumbnail

By

Published : Jul 3, 2022, 9:55 AM IST

ETV Bharat / Videos

ಬಿಹಾರದಲ್ಲಿ ಚಲಿಸುತ್ತಿದ್ದ ರೈಲಿನ ಇಂಜಿನ್​ಗೆ ಬೆಂಕಿ, ಪ್ರಯಾಣಿಕರು ಪಾರು: ವಿಡಿಯೋ

ಬಿಹಾರದ ಭೆಲ್ವಾ ರೈಲು ನಿಲ್ದಾಣದ ಬಳಿ ಚಲಿಸುತ್ತಿದ್ದ ಡೆಮು ರೈಲಿನ ಇಂಜಿನ್​ನಲ್ಲಿ ಇಂದು ಬೆಳಗ್ಗೆ ದಿಢೀರ್​ ಬೆಂಕಿ ಕಾಣಿಸಿಕೊಂಡು ಆತಂಕ ಉಂಟಾಯಿತು. ಈ ರೈಲು ರಕ್ಸಾಲ್‌ನಿಂದ ನರ್ಕಟಿಯಾಗಂಜ್‌ಗೆ ತೆರಳುತ್ತಿತ್ತು. ಇಂಜಿನ್​ಗೆ ಬೆಂಕಿ ಹೊತ್ತಿಕೊಂಡ ಕಾರಣ ತಿಳಿದುಬಂದಿಲ್ಲ. ಎಲ್ಲ ಪ್ರಯಾಣಿಕರನ್ನು ರೈಲಿನಿಂದ ಸುರಕ್ಷಿತವಾಗಿ ಇಳಿಸಲಾಗಿದೆ. ಬೆಂಕಿ ಇತರೆ ಬೋಗಿಗಳಿಗೆ ಹರಡಿಲ್ಲ. ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸುವ ಕಾರ್ಯಾಚರಣೆ ನಡೆಸುತ್ತಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.