ಆಕಸ್ಮಿಕ ಬೆಂಕಿ : ಟ್ರ್ಯಾಕ್ಟರ್, ಮೂರು ಬೈಕ್ ಸೇರಿ ಗೃಹೋಪಯೋಗಿ ವಸ್ತುಗಳು ಸುಟ್ಟು ಭಸ್ಮ - farmers shed burnt in accidental fire at muddebihal
🎬 Watch Now: Feature Video
ಮುದ್ದೇಬಿಹಾಳ(ವಿಜಯಪುರ): ಆಕಸ್ಮಿಕ ಬೆಂಕಿ ಕಾಣಿಸಿಕೊಂಡು ಒಂದು ಟ್ರಾಕ್ಟರ್, ಮೂರು ಬೈಕ್ ಮತ್ತು ರೈತರ ಶೆಡ್ ಗಳು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಮುದ್ದೇಬಿಹಾಳ ತಾಲೂಕಿನ ಬಂಗಾರಗುಂಡ ಮುಖ್ಯರಸ್ತೆಯ ಲಕ್ಷ್ಮೀ ಕ್ಯಾಂಪ್ ನಲ್ಲಿ ನಡೆದಿದೆ. ಬುಧವಾರ ರಾತ್ರಿ 11 ಗಂಟೆಗೆ ಈ ಘಟನೆ ನಡೆದಿದ್ದು, ಆಂಧ್ರ ಪ್ರದೇಶದಿಂದ ವಲಸೆ ಬಂದಿದ್ದ ರೈತರಾದ ನಾನಿ ಸಂಜೀವ ರಾವ್, ನಾಗರಾಜ ಚೌಧರಿ, ಕಿಶೋರ ರೆಡ್ಡಿಗೆ ಸೇರಿದ ಶೆಡ್ಗಳು ಸಂಪೂರ್ಣ ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಶೆಡ್ ನಲ್ಲಿದ್ದ 5 ಕೆಜಿ ಮೆಣಸಿನ ಬೀಜ, ಒಂದು ಟ್ರ್ಯಾಕ್ಟರ್, 3 ಬೈಕ್, 4 ಮೋಟಾರ್ ಪಂಪ್, ಗೊಬ್ಬರ, ಅಕ್ಕಿ ಚೀಲ ಸೇರಿದಂತೆ ಗೃಹೋಪಯೋಗಿ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿದೆ. ಸುಮಾರು 35 ಲಕ್ಷಕ್ಕೂ ಹೆಚ್ಚಿನ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ.