ದಾವಣಗೆರೆಯಲ್ಲಿ ಧಾರಾಕಾರ ಮಳೆಗೆ ಒಡೆದ ಕೆರೆ ಏರಿ.. ಮುನ್ನೂರು ಎಕರೆ ಜಮೀನಿಗೆ ನುಗ್ಗಿದ ನೀರು - Heavy rain in Davanagere
🎬 Watch Now: Feature Video

ದಾವಣಗೆರೆ ತಾಲೂಕಿನ ಈಚಾಘಟ್ಟ ಗ್ರಾಮದಲ್ಲಿ ಸುರಿದ ಧಾರಾಕಾರ ಮಳೆಗೆ ಕೆರೆ ಕೋಡಿ ಬಿದ್ದು ಏರಿ ಒಡೆದಿದೆ. ಪರಿಣಾಮ ಮುನ್ನೂರು ಎಕರೆ ಜಮೀನಿಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ. ಮೆಕ್ಕೆಜೋಳ, ಅಡಕೆ, ಸೊಪ್ಪು ಹೀಗೆ ನಾನಾ ಬೆಳೆ ನೀರುಪಾಲಾಗಿದ್ದು, ರೈತರು ಕಣ್ಣೀರಿನಲ್ಲಿ ಕೈ ತೊಳೆಯುತ್ತಿದ್ದಾರೆ. ರೈತರು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದ್ರೂ ಕೂಡ ಸಣ್ಣ ನೀರಾವರಿ ಇಲಾಖೆ, ಕೃಷಿ ಹಾಗೂ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಭೇಟಿ ನೀಡಿಲ್ಲ. ಇನ್ನು ಎಕರೆಗೆ ಐವತ್ತು ಸಾವಿರ ಹಾಗೂ ಅಡಕೆಗೆ ಒಂದು ಎಕರೆ, ಒಂದು ಲಕ್ಷ ವ್ಯಯ ಮಾಡಿದ ರೈತರು ತಲೆ ಮೇಲೆ ಕೈ ಹೊತ್ತು ಕೂರುವ ಪರಿಸ್ಥಿತಿ ನಿರ್ಮಾಣವಾಗಿದೆ.