ಜಮೀನು ವಿವಾದ: ಗುಂಡು ಹಾರಿಸಿದ ತಂದೆ-ಮಗ.. ಮಹಿಳೆ ಸ್ಥಿತಿ ಗಂಭೀರ

By

Published : Apr 30, 2022, 4:24 PM IST

thumbnail
ಗ್ವಾಲಿಯರ್​(ಮಧ್ಯಪ್ರದೇಶ): ಜಮೀನು ವಿವಾದ ಸಂಬಂಧ ಉಂಟಾದ ಗಲಾಟೆ ವೇಳೆ ಟೆರೇಸ್ ಮೇಲೆ ನಿಂತುಕೊಂಡು ತಂದೆ-ಮಗ ಗುಂಡು ಹಾರಿಸಿರುವ ಪ್ರಕರಣ ಗ್ವಾಲಿಯರ್​​ನಲ್ಲಿ ನಡೆದಿದೆ. ಈ ವೇಳೆ ಮನೆಯ ಮುಂದೆ ಕುಳಿತುಕೊಂಡಿದ್ದ ಮಹಿಳೆಯ ಬೆನ್ನಿಗೆ ಗುಂಡು ತಗುಲಿ, ಗಂಭೀರವಾಗಿ ಗಾಯಗೊಂಡಿದ್ದಾರೆ. ಇವರನ್ನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಮಧ್ಯಪ್ರದೇಶದ ರೆಹತ್​ ಚರೈ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಜಮೀನು ವಿವಾದವಾಗಿ ಎರಡು ಕುಟುಂಬಗಳ ಮಧ್ಯೆ ವಿವಾದ ಉಂಟಾಗಿದೆ. ಈ ವೇಳೆ ಗುಂಡಿನ ದಾಳಿ ನಡೆದಿದೆ. ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ತನಿಖೆ ಆರಂಭಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.