ಸೈನಿಕ ಪಾರ್ಕ್ ಗೆ ಸ್ಮಾರ್ಟ್ ಸಿಟಿ ಟಚ್ ನೀಡಲು ಜಿಲ್ಲಾಡಳಿತ ನಿರ್ಧಾರ: ಈಟಿವಿ ಭಾರತ ವರದಿ ಫಲಶ್ರುತಿ - ನೀರಿಲ್ಲದೆ ಒಣಗಿದ ಹಸಿರು ಹುಲ್ಲು, ಎಲ್ಲೆಂದರಲ್ಲಿ ಮದ್ಯದ ಬಾಟಲಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-6409955-thumbnail-3x2-chai---copy-2.jpg)
ರಾಜ್ಯದಲ್ಲಿಯೇ ಮೊಟ್ಟ ಮೊದಲ ಬಾರಿಗೆ ನಗರದಲ್ಲಿ ನಿರ್ಮಾಣವಾಗಿದ್ದ ಸೈನಿಕ ಉದ್ಯಾನವನ ಜಿಲ್ಲಾಡಳಿತದ ನಿರ್ಲಕ್ಷ್ಯಕ್ಕೊಳಗಾಗಿ ನಿರ್ವಹಣೆ ಇಲ್ಲದೇ ಹಾಳಾಗಿ ಹೋಗಿತ್ತು. ನೀರಿಲ್ಲದೆ ಒಣಗಿದ ಹಸಿರು ಹುಲ್ಲು, ಎಲ್ಲೆಂದರಲ್ಲಿ ಬಿದ್ದಿರುವ ಮದ್ಯದ ಬಾಟಲಿಗಳು.. ಹೀಗೆ ಹಲವಾರು ಸಮಸ್ಯೆಗಳಿಂದ ಸೈನಿಕ ಉದ್ಯಾನವನ ಅವ್ಯವಸ್ಥೆಯ ಆಗರವಾಗಿತ್ತು. ಈ ಕುರಿತು ಫೆ. 29ರಂದು 'ಪಡ್ಡೆ ಹುಡುಗರ ತಾಣವಾಯ್ತು ಸೈನಿಕ ಶಿಲ್ಪ ಉದ್ಯಾನವನ' ಎಂಬ ಶೀರ್ಷಿಕೆಯಡಿ ಈಟಿವಿ ಭಾರತ ಸುದ್ದಿ ಪ್ರಕಟಿಸಿತ್ತು. ಸುದ್ದಿಯಿಂದ ಎಚ್ಚೆತ್ತುಕೊಂಡಿರುವ ಜಿಲ್ಲಾಡಳಿತ ಉದ್ಯಾನವನದ ನಿರ್ವಹಣೆಯನ್ನು ಮಹಾನಗರ ಪಾಲಿಕೆ ಸ್ಮಾರ್ಟ್ ಸಿಟಿ ವ್ಯಾಪ್ತಿಗೆ ನೀಡಿದೆ.