ಈಟಿವಿ ಭಾರತದೊಂದಿಗೆ ಚಿಕ್ಕಮಗಳೂರು ಜಿಲ್ಲೆಗೆ ಪ್ರಥಮ ರ‍್ಯಾಂಕ್ ಪಡೆದ ವಿದ್ಯಾರ್ಥಿನಿ ಚಿಟ್ಚಾಟ್ - ಕರ್ನಾಟಕ ದ್ವಿತೀಯ ಪಿಯುಸಿ ಫಲಿತಾಂಶ
🎬 Watch Now: Feature Video
ಚಿಕ್ಕಮಗಳೂರು: ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಇಂದು ಪ್ರಕಟವಾಗಿದೆ. ಜಿಲ್ಲೆಯ ಸೇಂಟ್ ಮೇರಿಸ್ ಕಾಲೇಜಿನ ವಿದ್ಯಾರ್ಥಿನಿ ರೂಮಿಯಾ ತಬಸುಮ್ ಅವರು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಎಂಟನೇ ಸ್ಥಾನ ಮತ್ತು ಜಿಲ್ಲೆಯಲ್ಲಿ ಪ್ರಥಮ ಸ್ಥಾನವನ್ನು ಪಡೆದು ಉತ್ತಮ ಸ್ಥಾನ ಪಡೆದಿದ್ದಾರೆ. ತಬಸುಮ್ 600ಕ್ಕೆ 590 ಅಂಕ ಗಳಿಸಿದ್ದಾರೆ. ಅಕೌಂಟ್ಸ್, ಬ್ಯುಸಿನೆಸ್ ಸ್ಟಡೀಸ್, ಸ್ಟ್ಯಾಟ್ಸ್ ವಿಷಯಗಳಲ್ಲಿ ನೂರಕ್ಕೆ ನೂರು, ಹಿಂದಿ 96, ಇಂಗ್ಲಿಷ್ 95, ಕಂಪ್ಯೂಟರ್ ಸೈನ್ಸ್ನಲ್ಲಿ 99 ಅಂಕಗಳನ್ನು ಗಳಿಸಿದ್ದಾರೆ. ಪ್ರಾಂಶುಪಾಲರು, ಪೋಷಕರು ರೂಮಿಯಾ ತಬಸುಮ್ ಸಾಧನೆಗೆ ಸಂತಸ ವ್ಯಕ್ತಪಡಿಸಿದ್ದು, ಈಟಿವಿ ಭಾರತದೊಂದಿಗೆ ಮಾತನಾಡಿದ್ದಾರೆ.