ಮಳೆ ನೀರಿನಿಂದ ವಿದ್ಯುತ್ ಉತ್ಪಾದನೆ: ತುಳಗೇರಿ ಗ್ರಾಮಸ್ಥರ ವಿನೂತನ ಯೋಜನೆ - ವಿದ್ಯುತ್
🎬 Watch Now: Feature Video
ಉತ್ತರಕನ್ನಡ ಜಿಲ್ಲೆಯ ಮಲೆನಾಡಿನ ಭಾಗವಾದ ಶಿರಸಿಯಲ್ಲಿ ಮಳೆಗಾಲ ಆರಂಭವಾದರೆ ನಾಲ್ಕೈದು ತಿಂಗಳು ಬಿಡುವಿಲ್ಲದ ಹಾಗೆ ಸುರಿಯುತ್ತದೆ. ಹೀಗಾಗಿ ಈ ನಾಲ್ಕೈದು ತಿಂಗಳ ಅವಧಿಯಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ತೀವ್ರವಾಗಿರುತ್ತದೆ. ಇದಕ್ಕೆ ಪರಿಹಾರವಾಗಿ ಶಿರಸಿಯ ಗ್ರಾಮವೊಂದರಲ್ಲಿ ಮಳೆ ನೀರಿನಿಂದ ವಿದ್ಯುತ್ ತಯಾರಿಸುವ ಹೊಸ ವಿಧಾನವನ್ನು ಗ್ರಾಮಸ್ಥರು ಕಂಡುಕೊಂಡಿದ್ದಾರೆ.