ನಿಲ್ಲದ ಎಲೆಕ್ಟ್ರಿಕ್ ಸ್ಕೂಟರ್ಗಳ ಸ್ಫೋಟ ಪ್ರಕರಣ.. ತಮಿಳುನಾಡಿನಲ್ಲಿ ಹೊತ್ತಿ ಉರಿದ ಸ್ಕೂಟರ್! - ಎಲೆಕ್ಟ್ರಿಕ್ ಸ್ಕೂಟರ್ಗಳ ಸ್ಫೋಟ
🎬 Watch Now: Feature Video

ದೇಶಾದ್ಯಂತ ಇ-ಸ್ಕೂಟರ್ಗಳಿಗೆ ಬೆಂಕಿ ಹೊತ್ತಿಕೊಳ್ಳುವ ಪ್ರಕರಣಗಳು ಮೇಲಿಂದ ಮೇಲೆ ಕೇಳಿ ಬರಲು ಶುರುವಾಗಿದ್ದು, ಇವುಗಳ ಸ್ಫೋಟದಿಂದಾಗಿ ಅನೇಕರು ತಮ್ಮ ಪ್ರಾಣ ಸಹ ಕಳೆದುಕೊಂಡಿದ್ದಾರೆ. ಇದೀಗ ತಮಿಳುನಾಡಿನಲ್ಲಿ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತಿಂಡಿವನಂನ ಜಯಭಾರತಿ ಎಂಬುವವರು ಪತ್ನಿಗೆ ಚಿಕಿತ್ಸೆ ನೀಡಲು ಎಲೆಕ್ಟ್ರಿಕ್ ಸ್ಕೂಟರ್ ಮೇಲೆ ಖಾಸಗಿ ಆಸ್ಪತ್ರೆಗೆ ತೆರಳಿದ್ದರು. ರಸ್ತೆ ಬದಿಯಲ್ಲಿ ಸ್ಕೂಟರ್ ಪಾರ್ಕ್ ಮಾಡಿದ ವೇಳೆ ಇದ್ದಕ್ಕಿದ್ದಂತೆ ಬೆಂಕಿ ಹೊತ್ತಿಕೊಂಡಿದೆ. ವಿಷಯ ತಿಳಿದು ಸ್ಥಳಕ್ಕಾಗಮಿಸಿರುವ ಅಗ್ನಿಶಾಮಕ ದಳ ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆದರೆ, ಸ್ಕೂಟರ್ ಸಂಪೂರ್ಣವಾಗಿ ಸುಟ್ಟು ಕರಕಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ.