ಶಿವಧನುಸ್ಸು ಮುರಿದು ವಧು ವರಿಸಿದ ವರ... ಗೋಕರ್ಣದಲ್ಲೊಂದು ವಿಶಿಷ್ಟ ಮದುವೆ - ಗೋಕರ್ಣದ ಭದ್ರಕಾಳಿ ದೇವಸ್ಥಾನ
🎬 Watch Now: Feature Video
ಗೋಕರ್ಣದ ಭದ್ರಕಾಳಿ ದೇವಸ್ಥಾನದ ಅರ್ಚಕ ಶ್ರೀಧರ್ ಗೋವಿಂದ ಭಟ್ ಹಾಗೂ ಮಮತಾ ದಂಪತಿಯ ಪುತ್ರಿ ನಿಶಾ ಮತ್ತು ಅದೇ ಗ್ರಾಮದ ಆಶಾ ಹಾಗೂ ರಾಮದಾಸ್ ಕಾಶಿನಾಥ್ ಕಾಮತ್ ಪುತ್ರ ಗಿರೀಶ್ ಎಂಬುವವರ ಮದುವೆ ಪುರಾಣ ಕಲ್ಪನೆಯನ್ನು ಬಿಚ್ಚಿಟ್ಟಿದೆ. ರಾಮಾಯಣದಲ್ಲಿ ಶ್ರೀರಾಮ ಶಿವಧನುಸ್ಸನ್ನು ಎತ್ತಿ ಮುರಿದು ಸೀತೆಯನ್ನು ಮದುವೆಯಾದಂತೆ ಮದುವೆ ಮನೆಯಲ್ಲಿ ಶಿವಧನುಸ್ಸು ಇಡಲಾಗಿತ್ತು. ಹಲವು ಯುವಕರು ಬಂದು ಇದನ್ನು ಎತ್ತಲು ಪ್ರಯತ್ನಿಸಿದರಾದರೂ ಎಲ್ಲರೂ ಸೋತಿದ್ದರು. ಕೊನೆಗೆ ವರ ಗಿರೀಶ್ ಬಿಲ್ಲನ್ನು ಎತ್ತಿ ಮುರಿದು ಸ್ವಯಂ ವರದಲ್ಲಿ ವಿಜೇತರಾಗಿ, ನಿಶಾ ಅವರನ್ನು ವಿವಾಹವಾದರು.