ಧಾರವಾಡ:ಬಾಗಿಲು ತೆರೆದರೂ ವಿಠ್ಠಲನ ದರ್ಶನಕ್ಕೆ ಬರುತ್ತಿಲ್ಲ ಭಕ್ತರು - Dharwad's pete Balekaayi
🎬 Watch Now: Feature Video

ಧಾರವಾಡ: ಇಂದು ಆಷಾಢ ಏಕಾದಶಿಯಾಗಿದ್ದು, ಅಪಾರ ಭಕ್ತಗಣದ ಸಮ್ಮುಖದಲ್ಲಿ ವಿಜೃಂಭಣೆಯಿಂದ ನಡೆಯುವ ಪಂಡರಿನಾಥನ ಪೂಜೆ ಭಕ್ತರಿಲ್ಲದೇ ಮಾಡಲಾಗಿದೆ. ಪೇಟೆ ಬಾಳೆಕಾಯಿ ಓಣಿಯಲ್ಲಿನ ನಾಮದೇವ ಹರಿ ಮಂದಿರದಲ್ಲಿ ಪ್ರತಿವರ್ಷ ಆಷಾಢ ಏಕಾದಶಿ ಪೂಜೆಗೆ ಎಂದು ಸಹಸ್ರಾರು ಭಕ್ತರು ಆಗಮಿಸುತ್ತಿದ್ದರು. ಸರತಿ ಸಾಲಿನಲ್ಲಿ ನಿಂತು ಪೂಜೆಗೆ ಸಾಕ್ಷಿಯಾಗಿ ದರ್ಶನ ಪಡದುಕೊಳ್ಳುತ್ತಿದ್ದರು. ಆದರೆ, ಈ ಬಾರಿ ಕೊರೊನಾ ಭೀತಿ ಇದ್ದು, ಪರಿಸ್ಥಿತಿ ಸಹಜವಾಗಿಲ್ಲ. ಹೀಗಾಗಿ ಭಕ್ತರಿಲ್ಲದೆಯೇ ವಿಠ್ಠಲ ರುಕ್ಮಿಣಿಗೆ ದೇವಸ್ಥಾನ ಮಂಡಳಿಯಿಂದ ಸಾಂಕೇತಿಕ ಪೂಜೆ ಮಾಡಿದ್ದಾರೆ.