ಅಪ್ಪನ ಸಮಾಧಿ ಮುಂದೆ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನ ಆಚರಿಸಿದ ಸೈನಿಕನ ಪುತ್ರಿ - ನಿವೃತ್ತ ಸೈನಿಕ ನವೀನ್ ಅವರ ಸ್ಮಾರಕದ ಮುಂದೆ 9 ವರ್ಷದ ಪುತ್ರಿ ಹನಿ ಎಂಬಾಕೆ ಕೊಳಲಿನಲ್ಲಿ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನ ಆಚರಿಸಿದ್ದಾಳೆ
🎬 Watch Now: Feature Video
ಚಾಮರಾಜನಗರ: ಯಳಂದೂರು ತಾಲೂಕಿನ ಮಲಾರಪಾಳ್ಯದಲ್ಲಿ ನಿವೃತ್ತ ಸೈನಿಕ ನವೀನ್ ಅವರ ಸ್ಮಾರಕದ ಮುಂದೆ 9 ವರ್ಷದ ಪುತ್ರಿ ಹನಿ ಎಂಬಾಕೆ ಕೊಳಲಿನ ಮೂಲಕ ರಾಷ್ಟ್ರಗೀತೆ ನುಡಿಸಿ ಸ್ವಾತಂತ್ರ್ಯ ದಿನಾಚರಿಸಿದ್ದಾಳೆ. ಮಗಳ ಜೊತೆ ತಾಯಿ ಭವ್ಯಾ ಇದ್ದರು. ನವೀನ್ ಅವರು ಅಪಘಾತದಲ್ಲಿ ಅಸುನೀಗಿದ್ದರು. ಪ್ರತೀ ವರ್ಷ ಸ್ವಾತಂತ್ರ್ಯ ದಿನದಂದು ಈ ಕುಟುಂಬ ವಿಶೇಷ ನಮನ ಸಲ್ಲಿಸುತ್ತಿದೆ. ಇಂದಿನ ಕಾರ್ಯಕ್ರಮದಲ್ಲಿ ಗೌಡಹಳ್ಳಿ ಗ್ರಾ.ಪಂ ಸಿಬ್ಬಂದಿ, ಯುವಕರು ಭಾಗಿಯಾಗಿದ್ದರು.