ವೆಂಕಟಾಪುರ ಹೊಳೆಯ ಸಮೀಪ ಮೊಸಳೆ ಪ್ರತ್ಯಕ್ಷ: ಆತಂಕದಲ್ಲಿ ಸ್ಥಳೀಯರು - ಮೊಸಳೆ ಪ್ರತ್ಯಕ್ಷ ವಿಡಿಯೋ

🎬 Watch Now: Feature Video

thumbnail

By

Published : Aug 22, 2022, 8:19 AM IST

ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ವೆಂಕಟಾಪುರ ಹೊಳೆಯ ಸಮೀಪ ಮೊಸಳೆ ಪ್ರತ್ಯಕ್ಷವಾಗಿದೆ. ಹೊಳೆಯ ನಡುವೆ ಇರುವ ಮಣ್ಣಿನ ದಿಬ್ಬದಲ್ಲಿ ಕಳೆದ 10 ದಿನಗಳಿಂದ ಸುಮಾರು 5-6 ಅಡಿ ಉದ್ದದ್ದ ಮೊಸಳೆಯೊಂದು ಬೀಡು ಬಿಟ್ಟಿದೆ. ಕಳೆದ ವರ್ಷ ಅಕ್ಟೋಬರ್​​ನಲ್ಲಿ ನೀಲಕಂಠ ಭಾಗದಲ್ಲಿ ಮೊಸಳೆ ಪ್ರತ್ಯಕ್ಷಗೊಂಡಿತ್ತು. ಈಗ ಈ ಭಾಗದಲ್ಲಿ ಮೊಸಳೆ ಮತ್ತೊಮ್ಮೆ ಕಾಣಿಸಿಕೊಂಡಿದ್ದು, ಜನರಲ್ಲಿ ಆತಂಕ ಸೃಷ್ಟಿಸಿದೆ. ಪ್ರತಿ ವರ್ಷ ಈ ಭಾಗದ ಸುತ್ತ-ಮುತ್ತ ಮೊಸಳೆ ಪ್ರತ್ಯಕ್ಷವಾಗುತ್ತಿರುವುದು ಅರಣ್ಯ ಇಲಾಖೆಗೆ ತಲೆ ನೋವಾಗಿ ಪರಿಣಮಿಸಿದೆ. ಮೊಸಳೆ ಪ್ರತ್ಯಕ್ಷವಾಗಿರುವ ಬಗ್ಗೆ ಮಾಹಿತಿ ತಿಳಿದ ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾರ್ಯ ಕೈಗೊಂಡಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.