ಕುಂದಾಪುರ: ಮೂರಾಬಟ್ಟೆಯಾಗಿದೆ ಕೊರಗರ ಕಾಲೋನಿ ಮೂಲ ನಿವಾಸಿಗಳ ಬದುಕು - ಕುಂದಾಪುರ ತಾಲೂಕು ಅಂಬೇಡ್ಕರ್ ನಗರ ಕೊರಗರ ಕಾಲೋನಿ
🎬 Watch Now: Feature Video

ಟಾರ್ಪಲ್, ತುಕ್ಕು ಹಿಡಿದ ತಗಡು ಶೀಟುಗಳಿಂದಲೇ ನಿರ್ಮಾಣ ಮಾಡಿಕೊಳ್ಳಲಾದ ಪುಟ್ಟ ಕುಟೀರಗಳು. ಅವೂ ಕೂಡ ನೆಲಕ್ಕೊರಗಿ ಈಗಲೋ ಆಗಲೋ ಎನ್ನುತ್ತಿವೆ. ಹತ್ತಾರು ಸಂಸಾರ, ಹಾವು - ಚೇಳು- ಸೊಳ್ಳೆಗಳ ಕಾಟ. ದಿನ ಬೆಳಗಾದರೆ ಹರಿದು ಬರೋ ತ್ಯಾಜ್ಯದ ಓಣಿಯ ದಂಡೆಗೆ ತಾಗಿ ನೆಲೆಸಿರೋ ಮೂಲ ನಿವಾಸಿಗಳ ಬದುಕು ಅಕ್ಷರಶಃ ಅತಂತ್ರವಾಗಿದೆ. ಒಪ್ಪತ್ತು ಕೂಡಾ ನೆಮ್ಮದಿಯಾಗಿ ಉಣ್ಣಲಾಗದ ಅವಸ್ಥೆ. ಇದು ಕುಂದಾಪುರ ತಾಲೂಕು ಅಂಬೇಡ್ಕರ್ ನಗರ ಕೊರಗರ ಕಾಲೊನಿ ದುಸ್ಥಿತಿ.