75ನೇ ಸ್ವಾತಂತ್ರ್ಯೋತ್ಸವ ಸಂದರ್ಭದಲ್ಲಿ ಮಗುವಿನ ಜನನ: 'ಭಾರತ' ಎಂದು ನಾಮಕರಣ - 75ನೇ ಸ್ವಾತಂತ್ರ್ಯೋತ್ಸವ
🎬 Watch Now: Feature Video
ಕೊಟ್ಟಾಯಂ(ಕೇರಳ): ದೇಶ 75ನೇ ಸ್ವಾತಂತ್ರ್ಯೋತ್ಸವ ಸಂಭ್ರಮದಲ್ಲಿದ್ದು ಹರ್ ಘರ್ ತಿರಂಗಾ ಅಭಿಯಾನದ ಜೊತೆಗೆ ಆಜಾದಿ ಕಾ ಅಮೃತ ಮಹೋತ್ಸವ ಆಚರಣೆ ಮಾಡಲಾಗ್ತಿದೆ. ಈ ಶುಭ ಘಳಿಗೆಯಲ್ಲಿ ಜನಿಸಿರುವ ನವಜಾತ ಶಿಶುವಿಗೆ ಇಲ್ಲೋರ್ವ ದಂಪತಿ ಭಾರತ ಎಂದು ನಾಮಕರಣ ಮಾಡಿದ್ದಾರೆ. ಕೊಟ್ಟಾಯಂನಲ್ಲಿ ರಂಜಿತ್ ರಾಜನ್ ಮತ್ತು ಸನಾ ದಂಪತಿಗೆ ಜುಲೈ 12ರಂದು ಹೆಣ್ಣು ಮಗು ಜನಿಸಿದೆ. ರಂಜಿತ್ ಸೇನೆ ಸೇರಲು ಬಯಸಿದ್ದರು. ಆದರೆ, 9ನೇ ತರಗತಿಯಲ್ಲಿ ಶಾಲೆ ಬಿಟ್ಟರು. ದೇಶಕ್ಕಾಗಿ ಏನನ್ನೂ ಮಾಡಲು ಸಾಧ್ಯವಾಗಲಿಲ್ಲ ಎಂಬ ಕೊರಗು ಅವರಲ್ಲಿತ್ತು. ಇದೀಗ ಹುಟ್ಟಿರುವ ಮಗುವಿಗೆ ಭಾರತ ಎಂದು ನಾಮಕರಣ ಮಾಡಿದ್ದಾರೆ. 2021ರಲ್ಲಿ ಅನ್ಯ ಜಾತಿಯ ಯುವತಿಯೊಂದಿಗೆ ಪ್ರೀತಿಯ ಬಲೆಯಲ್ಲಿ ಬಿದ್ದು, ಮದುವೆ ಮಾಡಿಕೊಂಡಿದ್ದಾರೆ.