ರೈತರ ಸಾಲ ಮನ್ನಾ ಮಾಡದಿರುವುದೇ ಆರ್ಥಿಕತೆ ಹಿಂದುಳಿಯಲು ಕಾರಣವಂತೆ: ರಾಹುಲ್ ಗಾಂಧಿ! - ಹರಿಯಾಣ ವಿಧಾನಸಭೆ
🎬 Watch Now: Feature Video
2014ರ ನಂತರ ಭಾರತದ ಆರ್ಥಿಕತೆ ಇಷ್ಟೊಂದು ಹಿಂದುಳಿಯಲು ಏನು ಕಾರಣ ಎಂಬುದರ ಕುರಿತು ರಾಹುಲ್ ಗಾಂಧಿ ಮಾತನಾಡಿದ್ದಾರೆ. ತಾವು ಅಮೆರಿಕದ ಫೇಮಸ್ ಅರ್ಥಶಾಸ್ತ್ರಜ್ಞರ ಬಳಿ ಇದರ ಬಗ್ಗೆ ಕೇಳಿದಾಗ, ಅವರು ಮಾತು ಕೇಳಿ ನನಗೂ ಆಶ್ಚರ್ಯವಾಯ್ತು. 2004-2014ರಲ್ಲಿ ನರೇಗಾ ಹಾಗೂ ರೈತರ ಸಾಲ ಮನ್ನಾ ಮಾಡಿದ್ದಕ್ಕಾಗಿ ದೇಶದ ಆರ್ಥಿಕತೆ ಅತಿ ವೇಗವಾಗಿ ಅಭಿವೃದ್ಧಿ ಹೊಂದಿತ್ತು. ಇದೀಗ ಅವುಗಳಿಗೆ ಕತ್ತರಿ ಹಾಕಿದ್ದಕ್ಕಾಗಿ ಭಾರತದ ಆರ್ಥಿಕತೆ ತೀರಾ ಹಿಂದುಳಿದಿದೆ ಎಂದು ತಿಳಿಸಿದ್ದಾರೆ ಎಂದಿದ್ದಾರೆ. ಹರಿಯಾಣ ವಿಧಾನಸಭೆ ಚುನಾವಣೆ ರಂಗೇರಿದ್ದು, ಇದೀಗ ರಾಹುಲ್ ಗಾಂಧಿ ಕಣಕ್ಕಿಳಿದು ಚುನಾವಣಾ ಪ್ರಚಾರ ನಡೆಸುತ್ತಿದ್ದಾಗ ಈ ಮಾತು ಹೇಳಿದ್ದಾರೆ.