ವನ್ಯಮೃಗ ಚಿರತೆಯ ಮೈದಡವಿ ಫೋಟೋ ಪಡೆದ ಜನರು: ವಿಡಿಯೋ - ಸಿಂಹವನ್ನು ಕಂಡರೆ ಎಂಥವರಿಗೂ ಭಯವೇ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-16445956-thumbnail-3x2-news.jpg)
ಕ್ರೂರ ಪ್ರಾಣಿಗಳಾದ ಹುಲಿ, ಚಿರತೆ, ಸಿಂಹವನ್ನು ಕಂಡರೆ ಎಂಥವರಿಗೂ ಭಯವೇ. ಅವುಗಳಿಗೆ ಸಿಕ್ಕಲ್ಲಿ ನಾವು ಆಹಾರವಾಗುವುದು ಪಕ್ಕಾ. ಆದರೆ, ಇಲ್ಲೊಂದು ವಿಡಿಯೋ ಮಾತ್ರ ಪೂರ್ತಿ ಉಲ್ಟಾ. ಚಿರತೆಯೊಂದನ್ನು ಜನರು ನಾಯಿ ಮರಿಯಂತೆ ಮುಟ್ಟಿ, ಬೆನ್ನು ತಟ್ಟಿದ್ದಾರೆ. ಜನರಿದ್ದರೂ ಚಿರತೆ ಏಕಚಿತ್ತತೆಯಿಂದ ನಿಂತುಕೊಂಡಿದೆ. ಜನರು ಮುಟ್ಟಿ ಮೈದಡವಿ, ವಿಡಿಯೋ, ಫೋಟೋ ತೆಗೆದುಕೊಂಡಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ಎಲ್ಲಿಯದ್ದು ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಇದೇನಾದರೂ ಕಾಡಿನ ಚಿರತೆಯೇ ಆಗಿದ್ದರೆ, ಇಷ್ಟೊತ್ತಿಗಾಗಲೇ ಅವರೆಲ್ಲರೂ ಹರಿಯ ಪಾದ ಸೇರಿರುವುದಂತೂ ಸುಳ್ಳಲ್ಲ ಬಿಡಿ.