ಲಾಕ್ಡೌನ್ಗೆ ತಲೆಕೆಡಿಸಿಕೊಳ್ಳದ ಚಿಕ್ಕಮಗಳೂರು ಜನತೆ: ಪ್ರತ್ಯಕ್ಷ ವರದಿ - ಕೊರೊನಾ ಸುದ್ದಿ
🎬 Watch Now: Feature Video

ಕೊರೊನಾ ವೈರಸ್ ತಡೆಗಟ್ಟಲು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾರ್ಚ್ 31ರವರೆಗೂ ಕರ್ನಾಟಕ ಲಾಕ್ಡೌನ್ಗೆ ಆದೇಶ ನೀಡಿದ್ದಾರೆ. ಆದರೂ ಸಹ ಚಿಕ್ಕಮಗಳೂರು ಜಿಲ್ಲೆಯಲ್ಲಿ ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಇಂದು ಬೆಳಗ್ಗೆಯಿಂದಲೇ ಸಾರ್ವಜನಿಕರು ರಸ್ತೆಗೆ ಬರುವುದರ ಮೂಲಕ ತಮ್ಮ ದಿನನಿತ್ಯದ ಚಟುವಟಿಕೆಯಲ್ಲಿ ತೊಡಗಿದ್ದರು. ಅಲ್ಲದೆ ಕೆಲವೊಂದು ಅಂಗಡಿ-ಮುಂಗಟ್ಟುಗಳು ತೆರೆದಿದ್ದು, ಎಂದಿನಂತೆ ವ್ಯಾಪಾರ ವಹಿವಾಟಿನಲ್ಲಿ ಜನ ತೊಡಗಿದ್ದರು. ಈ ಕುರಿತು ಒಂದು ಪ್ರತ್ಯಕ್ಷ ವರದಿ ಇಲ್ಲಿದೆ.