ವಿಡಿಯೋ ನೋಡಿ: ಪ್ಯಾಸೆಂಜರ್ ರೈಲಿನೊಳಗೆ ಗೂಳಿ ಹತ್ತಿಸಿ ಕಟ್ಟಿ ಹಾಕಿದ್ರು, ಕಾರಣವೇನು? - bull video viral
🎬 Watch Now: Feature Video

ಭಾಗಲ್‌ಪುರ (ಬಿಹಾರ): ಇಲ್ಲಿನ ಪ್ಯಾಸೆಂಜರ್ ರೈಲಿನಲ್ಲಿ ಗೂಳಿಯನ್ನು ಕಟ್ಟಿ ಹಾಕಿರುವ ವಿಡಿಯೋ ದೊರೆತಿದೆ. ಬೋಗಿಯೊಂದರ ಸೀಟ್ಗೆ ಹಗ್ಗದಿಂದ ಗೂಳಿಯನ್ನು ಕಟ್ಟಲಾಗಿದ್ದು, ರೈಲು ಹತ್ತಿದ ಪ್ರಯಾಣಿಕರು ತಬ್ಬಿಬ್ಬಾಗಿದ್ದರು. ಈ ಗೂಳಿ ಮಾರುಕಟ್ಟೆಯಲ್ಲಿ ತರಕಾರಿ ಮತ್ತು ಹಣ್ಣುಗಳನ್ನು ತಿಂದು ಹಾಕಿ ಜನರಿಗೂ ತೊಂದರೆ ಕೊಡುತ್ತಿತ್ತಂತೆ. ಇದರಿಂದ ಬೇಸತ್ತ ಕೆಲವರು ರೈಲಿಗೆ ಹತ್ತಿಸಿ ಕಟ್ಟಿ ಹಾಕಿ ಪರಾರಿಯಾಗಿದ್ದಾರೆ ಎಂದು ಹೇಳಲಾಗಿದೆ.