ಪೋಟೋ ಎಡಿಟ್ ಮಾಡಿ, ಅಶ್ಲೀಲವಾಗಿ ಚಿತ್ರಿಸಿ ಹಣಕ್ಕೆ ಬೇಡಿಕೆ: ವಿದ್ಯಾರ್ಥಿ ಸಾವಿಗೆ ಕಾರಣವಾದ ಲೋನ್ ಆ್ಯಪ್ - ವಿದ್ಯಾರ್ಥಿ ನಿಶಾಂಕ್ ರಾಥೋಡ್ ಸಾವಿನ ಪ್ರಕರಣ
🎬 Watch Now: Feature Video
ಭೋಪಾಲ್ (ಮಧ್ಯಪ್ರದೇಶ): ಮಧ್ಯಪ್ರದೇಶದಲ್ಲಿ ನಡೆದ ಬಿಟೆಕ್ ವಿದ್ಯಾರ್ಥಿ ನಿಶಾಂಕ್ ರಾಥೋಡ್ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಚೈನೀಸ್ ಇನ್‌ಸ್ಟಂಟ್ ಲೋನ್ ಆಪ್‌ನಿಂದ ವಿದ್ಯಾರ್ಥಿ ಸಾಲ ಪಡೆದಿದ್ದ. ಈ ಸಾಲದ ಮೂಲ ಮೊತ್ತಕ್ಕಿಂತ ಹಲವು ಪಟ್ಟು ಹೆಚ್ಚು ಹಣ ಪಾವತಿಸುವಂತೆ ವಿದ್ಯಾರ್ಥಿಗೆ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡಲಾಗುತ್ತಿತ್ತು. ಅಲ್ಲದೇ, ವಿದ್ಯಾರ್ಥಿಯ ಮೊಬೈಲ್ ಹ್ಯಾಕ್ ಮಾಡಿ ಮೊಬೈಲ್ನಲ್ಲಿದ್ದ ಮಹಿಳಾ ಸ್ನೇಹಿತೆಯರ ಫೋಟೋಗಳನ್ನು ಕದ್ದಿದ್ದರು. ಬಳಿಕ ಅವುಗಳನ್ನು ಎಡಿಟ್ ಮಾಡಿ, ಅಶ್ಲೀಲವಾಗಿ ಚಿತ್ರಿಸಿ ಹಣಕ್ಕೆ ಬೇಡಿಕೆ ಇಡಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.