ಪತ್ನಿ ಅನಾರೋಗ್ಯದ ನಡುವೆಯೂ ಪ್ರವಾಹ ಸಂತ್ರಸ್ತರನ್ನು ರಕ್ಷಿಸುತ್ತಿರುವ ಬೋಟ್ಮ್ಯಾನ್! - ಕೋಣಸೀಮೆ ಜಿಲ್ಲೆಯಲ್ಲಿ ಪ್ರವಾಹ ಸಂತ್ರಸ್ತರನ್ನು ರಕ್ಷಿಸಿದ ಬೋಟ್ ನಿರ್ವಾಹಕ
🎬 Watch Now: Feature Video
ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದರೂ ಲೆಕ್ಕಿಸದೆ ಲಂಕಾ ತಾತಮ್ಮ ಎಂಬ ಬೋಟ್ ನಿರ್ವಾಹಕರೊಬ್ಬರು ಕಳೆದ ನಾಲ್ಕು ದಿನಗಳಿಂದ ಪ್ರವಾಹ ಸಂತ್ರಸ್ತರನ್ನು ಸ್ಥಳಾಂತರಿಸುತ್ತಿದ್ದಾರೆ. ಆಂಧ್ರಪ್ರದೇಶದ ಕೋನಾಸೀಮೆ ಜಿಲ್ಲೆಯ ಲಂಕಾ ಗನ್ನವರಂ ಗ್ರಾಮದಲ್ಲಿ ಲಂಕಾ ತಾತಮ್ಮ ಪರೋಪಕಾರದ ಕೆಲಸವನ್ನು ಮುಂದುವರಿಸಿದ್ದಾರೆ. ಪತ್ನಿ ಕೃಷ್ಣವೇಣಿ ಅವರು 5 ತಿಂಗಳಿನಿಂದ ತೀವ್ರ ಅಸ್ವಸ್ಥರಾಗಿದ್ದಾರೆ. ಹೀಗಾಗಿ ಅವರನ್ನು ತಾರಸಿ ಮನೆಯ ಮೇಲೆ ಇರಿಸಲಾಗಿದೆ. ಕಳೆದ ಎರಡು ವರ್ಷಗಳ ಹಿಂದಿನಿಂದಲೂ ಬೋಟ್ ಮೂಲಕ ಸಂತ್ರಸ್ತರನ್ನು ಸ್ಥಳಾಂತರಿಸಿದರೂ ಸರ್ಕಾರದಿಂದ ಬಾಕಿ ಹಣ ಬಂದಿಲ್ಲ. ಈ ಬಾರಿಯಾದರೂ ಹಣ ನೀಡಿದರೆ ಅನುಕೂಲವಾಗುತ್ತದೆ ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ ತಾತಮ್ಮ. ಸರ್ಕಾರ ಇವರ ಸಂಕಷ್ಟಕ್ಕೆ ಸ್ಪಂದಿಸಬೇಕಿದೆ.