ಬೆಂಗಾಲ್ ಸಫಾರಿ ಪಾರ್ಕ್ನಲ್ಲಿ ತಾಯಿ ಜತೆ ರಾಯಲ್ ಬೆಂಗಾಲ್ ಹುಲಿಮರಿಗಳ ಆಟ - ರಾಯಲ್ ಬೆಂಗಾಲ್ ಟೈಗರ್ ಮರಿಗಳ ವೀಡಿಯೊ
🎬 Watch Now: Feature Video
ಸಿಲಿಗುರಿಯ ಬೆಂಗಾಲ್ ಸಫಾರಿ ಪಾರ್ಕ್ನಲ್ಲಿ ತನ್ನ ನಾಲ್ಕು ಮುದ್ದಾದ ಮರಿಗಳೊಂದಿಗೆ ತಾಯಿ ಹುಲಿ ಆಟವಾಡುತ್ತಿರುವ ವಿಡಿಯೋವೊಂದು ಶನಿವಾರದಿಂದ ವೈರಲ್ ಆಗುತ್ತಿದೆ. ಶೀಲಾ ಎನ್ನುವ ರಾಯಲ್ ಬೆಂಗಾಲ್ ತಾಯಿ ಹುಲಿ ಮಾರ್ಚ್ 14ರಂದು ಐದು ಮರಿಗಳಿಗೆ ಜನ್ಮ ನೀಡಿದೆ. ಅದರಲ್ಲಿ ಒಂದು ಅಪೌಷ್ಟಿಕತೆಯಿಂದ ಸಾವನ್ನಪ್ಪಿತ್ತು. ಉಳಿದ ಮರಿಗಳ ಬಗ್ಗೆ ಪಾರ್ಕ್ನ ಅಧಿಕಾರಿಗಳು ಕಾಳಜಿ ವಹಿಸಿದ್ದು, ಮುಂದಿನ ಎರಡು ತಿಂಗಳವರೆಗೆ ಮರಿಗಳನ್ನು ಪ್ರವಾಸಿಗರ ವೀಕ್ಷಣೆಗೆ ತರಲಾಗುವುದಿಲ್ಲ ಎಂದಿದ್ದಾರೆ. ಆರೋಗ್ಯವಾಗಿರುವ ಮರಿಗಳು ತಮ್ಮ ತಾಯಿಯೊಂದಿಗೆ ಆಟವಾಡುತ್ತಿರುವ ವಿಡಿಯೋ ಎಲ್ಲರ ಗಮನ ಸೆಳೆದಿದ್ದು, ಮುಂದಿನ ದಿನಗಳಲ್ಲಿ ಉದ್ಯಾನವನದ ಆಕರ್ಷಣೆಯ ಕೇಂದ್ರ ಬಿಂದುವಾಗಲಿದೆ.