ಬಸವಕಲ್ಯಾಣದಲ್ಲಿ ಹೆಬ್ಬಾವು ದಾಳಿಗೆ ಕುರಿ ಬಲಿ - ಬಸವಕಲ್ಯಾಣದಲ್ಲಿ ಹೆಬ್ಬಾವು ದಾಳಿಗೆ ಕುರಿ ಸಾವು
🎬 Watch Now: Feature Video
ಬಸವಕಲ್ಯಾಣ: ಅಡವಿಯಲ್ಲಿ ಹುಲ್ಲು ಮೇಯುತ್ತಿದ್ದ ಕುರಿಯೊಂದರ ಮೇಲೆ ಹೆಬ್ಬಾವು ದಾಳಿ ನಡೆಸಿ ಕೊಂದಿರುವ ಘಟನೆ ತಾಲೂಕಿನ ಲಿಂಗದಳ್ಳಿ ಗ್ರಾಮದಲ್ಲಿ ಭಾನುವಾರ ಮಧ್ಯಾಹ್ನ ನಡೆದಿದೆ. ಗ್ರಾಮದ ನಿವಾಸಿ ಲಕ್ಷ್ಮಿಬಾಯಿ ರಾಮಣ್ಣ ವಾಡೇಕರ್ ಅವರಿಗೆ ಸೇರಿದ ಕುರಿ ಮೃತಪಟ್ಟಿದೆ. ಕುರಿ ಮೇಲೆ ದಿಢೀರ್ ದಾಳಿ ನಡೆಸಿದ ಬೃಹತ್ ಗಾತ್ರದ ಹೆಬ್ಬಾವು ಕುರಿ ಕುತ್ತಿಗೆಗೆ ಸುರಳಿ ಹಾಕಿ ಬಲಿ ಪಡೆದಿದೆ. ಇನ್ನೇನು ಕುರಿಯನ್ನು ತಿಂದು ಹಾಕಬೇಕು ಎನ್ನುವಷ್ಟರಲ್ಲಿ ಸುದ್ದಿ ತಿಳಿದು ಸ್ಥಳಕ್ಕೆ ಬಂದ ಉಪ ವಲಯ ಆರಣ್ಯಾಧಿಕಾರಿ ಸುರೇಶ ಕನಕಟ್ಟಾ ನೇತೃತ್ವದ ಸಿಬ್ಬಂದಿ ತಂಡ ತಡೋಳಾ ಗ್ರಾಮದ ಉರಗ ತಜ್ಞ ಸೈಯದ್ ಗನಿ ಅವರನ್ನು ಸ್ಥಳಕ್ಕೆ ಕರೆಸಿಸಿ, ಹೆಬ್ಬಾವನ್ನು ಸುರಕ್ಷಿತವಾಗಿ ಹಿಡಿದು ಆರಣ್ಯ ಪ್ರದೇಶಕ್ಕೆ ಬಿಟ್ಟಿದ್ದಾರೆ.