ಭಾವೈಕ್ಯತೆಗೆ ಸಾಕ್ಷಿಯಾದ ಮಾರಮ್ಮನ ಜಾತ್ರೆ.. ದೇವಿ ಉತ್ಸವದಲ್ಲಿ ಹಿಂದೂ-ಮುಸ್ಲಿಂ ಸಾಮರಸ್ಯ ನೋಡಿ - ಭಾವೈಕ್ಯತೆಗೆ ಸಾಕ್ಷಿಯಾದ ಮಾರಮ್ಮನ ಜಾತ್ರೆ
🎬 Watch Now: Feature Video
ಬೆಂಗಳೂರು: ಚಂದ್ರಾ ಲೇಔಟ್ ವ್ಯಾಪ್ತಿಯ ಗಂಗೊಂಡನಹಳ್ಳಿಯಲ್ಲಿ ಗ್ರಾಮದೇವತೆ ಮಾರಮ್ಮನ ಜಾತ್ರಾ ಮಹೋತ್ಸವ ನಡೆಯುತ್ತಿದ್ದು, ಉತ್ಸವ ಮೂರ್ತಿ ಸ್ಥಳಿಯ ಮಸೀದಿ ಬಳಿ ಬರುತ್ತಿದ್ದಂತೆ ತಂಪು ಪಾನೀಯ ನೀಡಿ ಕೈ ಕುಲುಕಿ ಆತ್ಮೀಯವಾಗಿ ಬರಮಾಡಿಕೊಂಡ ಮುಸ್ಲಿಂ ಸಮುದಾಯದ ಜನ ಹಿಂದೂ ಧರ್ಮೀಯರೊಂದಿಗೆ ಒಟ್ಟೊಟ್ಟಿಗೆ ಕುಣಿದು ಕುಪ್ಪಳಿಸಿದ್ದಾರೆ. ಸದ್ಯ ಆಜಾನ್‌ಗೆ ಪ್ರತಿಯಾಗಿ ಹನುಮಾನ್ ಚಾಲೀಸ ಪಠಣೆ ಎಂದು ಪರಸ್ಪರ ಚರ್ಚೆಗಳು ನಡೆಯುತ್ತಿರುವುದರ ಮಧ್ಯೆ ಇಂದಿನ ನಿದರ್ಶನ ಮಾದರಿಯಾಗಿದೆ. ಭಾವೈಕ್ಯತೆಗೆ ಮಾರಮ್ಮನ ಜಾತ್ರೆ ಸಾಕ್ಷಿಯಾಗಿದೆ.