ದೇವರಿಗೆ ಕೈ ಮುಗಿದು 3 ಹಣದ ಹುಂಡಿ, 2 ಘಂಟೆ ಕದ್ದೊಯ್ದ ಕಳ್ಳ: ವಿಡಿಯೋ - donation boxes in Temple
🎬 Watch Now: Feature Video
ಜಬಲ್ಪುರ (ಮಧ್ಯಪ್ರದೇಶ): ದೇವಸ್ಥಾನದಲ್ಲಿ ಕಳ್ಳತನಕ್ಕೆ ಬಂದ ಕಳ್ಳನೋರ್ವ ಮೊದಲು ದೇವರಿಗೆ ಕೈಮುಗಿದು ನಂತರ ಮೂರು ಹಣದ ಹುಂಡಿಗಳು, ಎರಡು ದೊಡ್ಡ ಘಂಟೆಗಳು ಹಾಗೂ ವಿವಿಧ ಪೂಜಾ ಸಾಮಗ್ರಿಗಳನ್ನು ಕದ್ದೊಯ್ದ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದೆ. ಇಲ್ಲಿನ ಮಾತಾ ಮಹಾಲಕ್ಷ್ಮೀ ಮಂದಿರಕ್ಕೆ ನುಗ್ಗಿದ ಕಳ್ಳ ದೇವಿಗೆ ಕೈಮುಗಿದು ತಲೆಬಾಗಿ ನಮಸ್ಕರಿಸಿದ ನಂತರ ಕೈಗೆ ಸಿಕ್ಕಿರುವುದನ್ನು ದೋಚಿದ್ದಾನೆ. ಇದರ ದೃಶ್ಯಗಳು ದೇವಸ್ಥಾನದ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ವಿಡಿಯೋ ವೈರಲ್ ಆಗಿದೆ.