ಮುಂಬೈನ ಕಾಮಾಟಿಪುರದಲ್ಲಿ ಮಹಿಳೆ ಮೇಲೆ ಹಲ್ಲೆ.. ವಿಡಿಯೋ ವೈರಲ್ - ಈಟಿವಿ ಭಾರತ ಕನ್ನಡ
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಮಹಿಳೆಯೊಬ್ಬರಿಗೆ ನಡುರಸ್ತೆಯಲ್ಲೇ ಅವಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿರುವ ಘಟನೆ ಮುಂಬೈನ ಕಾಮಾಟಿಪುರದಲ್ಲಿ ನಡೆದಿದೆ. ಮಹಿಳೆ ಅಂಗಡಿ ಮುಂದೆ ಜಾಹೀರಾತು ಕುರಿತ ಬೊಂಬು ಅವಳಡಿಸಲು ಯತ್ನಿಸಲಾಗಿತ್ತು. ಆದರೆ, ತನ್ನ ಗಮನಕ್ಕೆ ತರದೇ ಅಂಗಡಿ ಮುಂದೆ ಬೊಂಬು ಅವಳಡಿಕೆ ಬಗ್ಗೆ ಮಹಿಳೆ ಆಕ್ಷೇಪ ವ್ಯಕ್ತಪಡಿಸಿದ್ದರು. ಇಷ್ಟಕ್ಕೇ ವ್ಯಕ್ತಿ ಮಹಿಳೆ ಮೇಲೆ ದಾಳಿ ಮಾಡಿದ್ದಾರೆ ಎನ್ನಲಾಗ್ತಿದೆ. ರಸ್ತೆಯಲ್ಲೇ ಮಹಿಳೆಯನ್ನು ತಳ್ಳಾಟ ನೂಕಾಟ ನಡೆಸಿ ಹಲ್ಲೆ ಮಾಡಲಾಗಿದೆ. ಈ ಘಟನೆಯ ವಿಡಿಯೋ ವೈರಲ್ ಆಗಿದ್ದು, ನಾಗಪಾದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.