ಭೀಮಾ ಹಿನ್ನೀರಲ್ಲಿ ಸಿಲುಕಿಕೊಂಡ ಬಸ್: ಸ್ಥಳೀಯರಿಂದ ಪ್ರಯಾಣಿಕರ ರಕ್ಷಣೆ - kalaburgi Bhima river flood
🎬 Watch Now: Feature Video
ಕಲಬುರಗಿ: ಸಾರಿಗೆ ಬಸ್ವೊಂದು ಪ್ರವಾಹಕ್ಕೆ ಸಿಲುಕಿ ಪ್ರಯಾಣಿಕರು ಪರದಾಡಿದ ಘಟನೆ, ಅಫಜಲಪುರ ತಾಲೂಕಿನ ಶಿರವಾಳ ಗ್ರಾಮದ ಬಳಿ ನಡೆದಿದೆ. ಅಫಜಲಪುರದಿಂದ ಕರ್ಜಗಿ ಗ್ರಾಮದ ಕಡೆ ಹೊರಟಿದ್ದ ಬಸ್, ಭೀಮಾ ನದಿ ಪ್ರವಾಹದ ಹಿನ್ನೀರಿನಲ್ಲಿ ಸಿಲುಕಿಕೊಂಡಿದೆ. ಸೈಲೆನ್ಸರ್ನಲ್ಲಿ ನೀರು ಹೋಗಿದ್ದರಿಂದ ಮಧ್ಯದಲ್ಲಿ ಬಸ್ ಬಂದ್ ಆಗಿದೆ. ಇದರಿಂದ ಗಾಬರಿಗೊಂಡ ಪ್ರಯಾಣಿಕರು, ಸ್ಥಳೀಯರ ಸಹಾಯದಿಂದ ಗಂಡಾಂತರದಿಂದ ಹೊರ ಬಂದಿದ್ದಾರೆ. ಬಸ್ಗೆ ಹಗ್ಗ ಕಟ್ಟಿ ಟ್ರ್ಯಾಕ್ಟರ್ ಸಹಾಯದಿಂದ ದಡ ಸೇರಿಸಲಾಯಿತು. ಭೀಮಾ ನದಿಯಲ್ಲಿ 8.50 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ನೀರು ಹರಿಬಿಡಲಾಗಿದೆ.